ಮೊಟೇಬೆನ್ನೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬಸ್ ಪಲ್ಟಿ; ಸ್ಥಳದಲ್ಲೇ ಇಬ್ಬರು ಸಾವು; 6 ಜನರಿಗೆ ಗಂಭೀರ ಗಾಯ

Motebennure NH Accident
Published on

ಹಾವೇರಿ/ ಬ್ಯಾಡಗಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ, ಸ್ಥಳದಲ್ಲೇ ಇಬ್ಬರು ಸಾವು, 6 ಜನರಿಗೆ ಗಂಭೀರ ಗಾಯ. 29 ಜನ ಪ್ರಾಣಪಾಯದಿಂದ ಪಾರು.

ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಮೊಟೇಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದ ಘಟನೆ. ಅರ್ನವಿ (11 ವರ್ಷ) ಎಂಬ ಬಾಲಕಿ ಹಾಗೂ ಯಶ್ ಎಂಬ ಸುಮಾರು 20 ವರ್ಷದ ಯುವಕ ಸಾವು

ಗಾಯಾಳುಗಳನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ, ಮಹಾರಾಷ್ಟ್ರದಿಂದ ಸಾಂಗ್ಲಿಯಿಂದ ತಮಿಳುನಾಡು ಕಡೆ ಹೊರಟಿದ್ದ ಬಸ್, ಮೊಟೇಬೆನ್ನೂರು ಗ್ರಾಮದ ಬಳಿ‌ ಬಸ್ ಮುಂದೆ ಇದ್ದ ಕಾರ್ ಅಡ್ಡ ಬಂದಿತ್ತು ಎನ್ನಲಾಗಿದೆ.

ಕಾರ್ ಗೆ ಅಪಘಾತವಾಗುವುದನ್ನು ತಪ್ಪಿಸಲು ಹೋಗಿ ಬಸ್ ಚಾಲಕ ಬ್ರೇಕ್ ಹಾಕಿದ್ದಾನೆ. ಮೊದಲು ಡಿವೈಡರ್ ಗೆ ಡಿಕ್ಕಿ ಹೊಡೆದು ಬಳಿಕ ಪಲ್ಟಿ ಆದ ಬಸ್. ಸ್ಥಳಕ್ಕೆ ಹಾವೇರಿ ಎಸ್ಪಿ ಯಶೋದಾ ವಂಟಗೋಡಿ ಭೇಟಿ. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಯಿಂದ ಗಾಯಾಳುಗಳ ರಕ್ಷಣಾ ಕಾರ್ಯ

ಬ್ಯಾಡಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ. ಹಲವು ಪುಟಾಣಿ ಮಕ್ಕಳಿಗೂ ಗಂಭೀರ ಗಾಯಗಳಾಗಿವೆ. ಸದ್ಯ ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net