ಹಾವೇರಿ: ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಬ್ಯಾಡಗಿ ತಾಲೂಕಿಗೆ ಸಂಬಂಧಿಸಿದಂತೆ ವಿವಿಧ ಕಿಟ್‌ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಗೌಂಡಿ ಸೇಫ್ಟಿ ಕಿಟ್-230, ಇಲೆಕ್ಟ್ರೀಶಿಯನ್ ಸೇಫ್ಟಿ ಕಿಟ್-55, ವೆಲ್ಡರ್ ಸೇಪ್ಟಿ ಕಿಟ್-15, ಕಾರ್ಪೆಂಟರ್ ಸೇಫ್ಟಿ ಕಿಟ್-40, ಪೇಂಟರ್ ಸೇಪ್ಟಿ ಕಿಟ್-55 ಹಾಗೂ ಪ್ಲಂಬರ್ ಸೇಪ್ಟಿ ಕಿಟ್-15 ಈ ರೀತಿಯಾಗಿ ವಿವಿಧ ಸುರಕ್ಷತಾ ಕಿಟ್‌ಗಳ ಸೌಲಭ್ಯಕ್ಕೆ ಅರ್ಹ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ನವೀಕರಣಗೊಂಡ ಗುರುತೀನ ಚೀಟಿ, ಆಧಾರ್‌ಕಾರ್ಡ್, ಈ ಹಿಂದೆ ಕಿಟ್ ಪಡೆಯದಿರುವ ಕುರಿತು ಸ್ವಯಂ ಘೋಷಣಾ ಪತ್ರ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಸೇರಿದಂತೆ ದಾಖಲಾತಿಗಳೊಂದಿಗೆ ನವೆಂಬರ್ 15ರೊಳಗಾಗಿ, ಕಾರ್ಮಿಕ ನಿರೀಕ್ಷಕರ ಕಾರ್ಯಾಲಯ, ಕಾಕೋಳ ರಸ್ತೆ ಗ್ಯಾಸ್ ಆಫೀಸ್ ಹತ್ತಿರ, ಬ್ಯಾಡಗಿ ಈ ಕಚೇರಿ ಸಲ್ಲಿಸಬೇಕು.
ಅರ್ಜಿಗಳನ್ನು ನಿಯಮಾನುಸಾರ ಮತ್ತು ಜ್ಯೇಷ್ಠತೆ ಅನುಸಾರ ಆಯ್ಕೆ ಮಾಡಿ ಹಂಚಿಕೆ ಮಾಡಲಾಗುವುದು ಎಂದು ಬ್ಯಾಡಗಿ ತಾಲೂಕಿನ ಕಾರ್ಮಿಕ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.