

ಬ್ಯಾಡಗಿ: ತಾಲೂಕಿನ ದುಮ್ಮಿಹಾಳ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅ.15ರಂದು ಬೆಳಗ್ಗೆ 9 ಗಂಟೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳ ಬಳಗ, ಗ್ರಾಮ ಪಂಚಾಯಿತಿ, ವಾಲ್ಮೀಕಿ ಸಂಘ, ಬಸವೇಶ್ವರ ಸಂಘ, ಅಂಬೇಡ್ಕರ್ ಸೇವಾ ಸಮಿತಿ, ಪ್ರಗತಿ ಪರ ರೈತ ಬಳಗದ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಎಲುಬು ಕೀಲು ತಜ್ಞ ಡಾ.ಕೆ.ಪಿ.ಪೃಥ್ವಿ, ಚರ್ಮ ರೋಗ ತಜ್ಞ ಡಾ.ಸ್ನಿಗ್ಧ ಹೆಗಡೆ, ಶಸ್ತ್ರ ಚಿಕಿತ್ಸಕ ಡಾ.ಪ್ರವೀಣ ಪವಾರ, ವೈದಿಕ ತಜ್ಞ ಡಾ.ಮಯೂರ ಭಟ್, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಶೃತಿ ಪ್ರಭು ಎಸ್., ಮತ್ತಿತರರು ಭಾಗವಹಿಸಲಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳ ಜನತೆ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದು ಪ್ರಕಟಣೆ ತಿಳಿಸಿದೆ.