ಬಸ್​ನಿಂದ ಬಿದ್ದು ಮಹಿಳೆ ದುರ್ಮರಣ

Crime Logo
Published on

ಹಾವೇರಿ: ಬಸ್​ನಿಂದ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ.

ಇಲ್ಲಿಯ ಶಿವಲಿಂಗೇಶ್ವರ ನಗರದ ಲಲಿತವ್ವ ಅಶೋಕ ಧನೋಜಿ (58) ಮೃತ ಮಹಿಳೆ.

ಇವರು ಬಸ್​ನಿಂದ ಇಳಿಯುತ್ತಿದ್ದ ಸಮಯದಲ್ಲಿ ಬಸ್​ ಚಾಲಕ ಏಕಾಏಕಿ ಬಸ್​ ಮುಂದೆ ಬಿಟ್ಟಿದ್ದರಿಂದ ಲಲಿತವ್ವ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಸಂಚಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net