

ಹಾವೇರಿ: ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಉಪ ಲೋಕಾಯುಕ್ತರು, ಇಲ್ಲಿನ ಅವ್ಯವಸ್ಥೆ, ಪ್ರಯಾಣಿಕರಿಂದ ಹಗಲು ದರೋಡೆ ಕಂಡು ದಂಗಾದರು. ಶೌಚಗೃಹಕ್ಕೆ 5 ರೂ. ಬೋರ್ಡ್ ಹಾಕಿ 10, 20 ರೂ. ಸಂಗ್ರಹಿಸುತ್ತಿದ್ದಾರೆ. ಬಸ್‌ಗಳು ತೀರಾ ಗಲೀಜಾಗಿವೆ. ಪಾರ್ಕಿಂಗ್‌ನಲ್ಲಿ ಲೈಸನ್ಸ್ ಇಲ್ಲದೇ ವಾಹನಗಳಿಗೆ 30 ರೂ. ವಸೂಲಿ ಮಾಡಿದ್ದಾರೆ. ಕನಿಷ್ಠ 5, 10 ರೂ. ಸಂಗ್ರಹಿಸಬೇಕು. 24 ಗಂಟೆ ಆದ ನಂತರ 20 ರೂ. ಸಂಗ್ರಹಿಸಬೇಕು. ಆದರೆ, ಇಲ್ಲಿ ಮನಬಂದಂತೆ ಸಂಗ್ರಹಿಸುತ್ತಿದ್ದಾರೆ. ಮೂರು ತಿಂಗಳ ಬುಕ್ ಪರಿಶೀಲಿಸಿದೆ. ಒಬ್ಬರಿಗೆ 170 ರೂ. ಹಾಕಿದ್ದಾರೆ ಎಂದು ಉಪಲೋಕಾಯುಕ್ತರು ಗರಂ ಆದರು. ಎಲ್ಲ ಸರಿಪಡಿಸುವಂತೆ ತಾಕೀತು ಮಾಡಿದರು.