ಬಸ್ ಹತ್ತುವಾಗ 50 ಸಾವಿರ ಕಳವು

Published on

ಹಾವೇರಿ: ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಬಸ್ ಹತ್ತುವಾಗಿ ಅವರ ಜೇಬಿನಲ್ಲಿದ್ದ 50,000 ರೂ. ಕದ್ದು ಪರಾರಿಯಾಗಿರುವ ಕುರಿತು ಹಾವೇರಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಗಳೂರ ಗ್ರಾಮದ ವಿದ್ಯಾರ್ಥಿ ವಿನಯ ವೀರಣ್ಣ ಬಡಿಗೇರ ಹಣ ಕಳೆದುಕೊಂಡವರು.

ಅ.8ರಂದು ಮಧ್ಯಾಹ್ನ ವಿನಯ ಬಸ್ ನಿಲ್ದಾಣದಲ್ಲಿ ಗುತ್ತಲ- ಹಡಗಲಿ ಬಸ್ ನಿಲ್ಲುವ ಪ್ಲಾಟ್‌ಫಾರ್ಮ್‌ನಲ್ಲಿ ಬಸ್‌ಗಾಗಿ ಕಾಯುತ್ತಿದ್ದರು. ಬಸ್ ಬಂದ ಕೂಡಲೇ ಹತ್ತುವಾಗ ಗದ್ದಲದ ನಡುವೆ ವಿನಯ ಜೇಬಿನಿಂದ ಕಳ್ಳರು ಹಣ ಹಾಗೂ ಬಸ್ ಪಾಸ್ ಕದ್ದಿದ್ದಾರೆ ಎಂದು ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net