ಹಾವೇರಿ: ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಮಹಿಳೆಯೊಬ್ಬರ ಬ್ಯಾಗ್‌ನಲ್ಲಿದ್ದ 9.45 ಲಕ್ಷ ರೂ. ಮೌಲ್ಯದ 210 ಗ್ರಾಂ ಚಿನ್ನಾಭರಣ ಕದ್ದಿರುವ ಕುರಿತು ಹಾವೇರಿ ಶರಹ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಣೆಬೆನ್ನೂರಿನ ಮಾರುತಿ ನಗರ ನಿವಾಸಿ ಸುನಿತಾ ಪೊಲೀಸ್‌ಗೌಡ್ರ ಎಂಬುವರು ಹಾವೇರಿಯಿಂದ ರಾಣೆಬೆನ್ನೂರ ಕಡೆಯ ಬಸ್ ಹತ್ತಲು ಮುಂದಾಗಿದ್ದರು. ಈ ವೇಳೆ ಕಳ್ಳರು ಅವರಿಗೆ ಗೊತ್ತಾಗದಂತೆ ಅವರ ಬಳಿ ಇದ್ದ ಬ್ಯಾಗ್‌ನ ಜಿಪ್ ತೆಗೆದು ಕ್ಷಣಾರ್ಧದಲ್ಲಿ ಚಿನ್ನಾಭರಣ ಕದ್ದಿದ್ದಾರೆ. ನಂತರ ಕಳ್ಳತನ ಆಗಿರುವುದು ಗೊತ್ತಾಗಿದೆ.
ಅದರಲ್ಲಿ 40 ಗ್ರಾಂ ತೂಕದ ಮಾಂಗಲ್ಯ ಸರ, 40 ಗ್ರಾಂ ಚಿನ್ನದ ಸರ, 20 ಗ್ರಾಂ ತೂಕದ ನೆಕ್ಲೆಸ್, 15 ಗ್ರಾಂ ತೂಕದ 6 ಬಳೆಗಳು, ಕಿವಿಯೋಲೆಗಳು, ಇತರ ಆಭರಣಗಳಿದ್ದವು ಎಂದು ದೂರಿನಲ್ಲಿ ದಾಖಲಾಗಿದೆ.