

ಹಾವೇರಿ: ನಗರದ ಇಜಾರಿ ಲಕಮಾಪುರದ ಜ್ಯೋತಿ ಬುದ್ದಿಮಾಂದ್ಯ ಮಕ್ಕಳ ಶಾಲೆಯಲ್ಲಿ ಮಂಗಳವಾರ ಶಾಲಾ ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಅವರ ಜನ್ಮದಿನ ಆಚರಿಸಲಾಯಿತು. ಶಾಲೆಯ ಮಕ್ಕಳಿಗೆ ಭರತ ಬೊಮ್ಮಾಯಿ ಸಮವಸ್ತ್ರ ವಿತರಿಸಿ, ಸಿಹಿ ಹಂಚಿದರು. ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮೀಜಿ, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಸಂತೋಷಕುಮಾರ ಪಾಟೀಲ, ನವೀನ ಸವಣೂರು, ಗಿರೀಶ ತುಪ್ಪದ, ಇತರರಿದ್ದರು.