ಹಾವೇರಿ; ಬಕೆಟ್‌ನಲ್ಲಿ ಬಿದ್ದು ಮಗು ಸಾವು !

24 Dakshit Yalamballimath
Published on

ಹಾವೇರಿ: ಮನೆಯಲ್ಲಿ ಆಟವಾಡುವಾಗ ನೀರಿನ ಬಕೆಟ್‌ನಲ್ಲಿ ಬಿದ್ದು ಒಂದು ವರ್ಷದ ಮಗು ಮೃತಪಟ್ಟ ಧಾರುಣ ಘಟನೆ ಇಲ್ಲಿನ ಶಿವಬಸವ ನಗರದಲ್ಲಿ ನಡೆದಿದೆ.

ದಕ್ಷಿತ್ ರವಿ ಯಳಂಬಲ್ಲಿಮಠ (1) ಮೃತಪಟ್ಟ ಮಗು. ಆಟವಾಡುವಾಗ ನೀರು ತುಂಬಿದ್ದ ಬಕೆಟ್‌ನಲ್ಲಿ ಮಗು ಆಕಸ್ಮಿಕವಾಗಿ ತಲೆ ಕೆಳಗಾಗಿ, ಕಾಲು ಮೇಲಾಗಿ ನೀರಿನಲ್ಲಿ ಮುಳುಗಿದೆ. ತಕ್ಷಣ ಗಮನಿಸಿದ ಪಾಲಕರು ಗಾಬರಿಗೊಂಡು ಮಗುವನ್ನು ಮೇಲೆ ಎತ್ತುವಷ್ಟರಲ್ಲಿ ಪ್ರಜ್ಞೆ ತಪ್ಪಿತ್ತು. ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಮಗು ಚಿಕಿತ್ಸೆ ಫಲಿಸದೇ ಗುರುವಾರ ರಾತ್ರಿ ಮೃತಪಟ್ಟಿದೆ ಎಂದು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net