

ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ತಮ್ಮ ಹೆಸರು ಕೇಳಿ ಬರುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಾನು ಈ ವಿಷಯದಲ್ಲಿ ಸ್ಪಷ್ಟವಾಗಿದ್ದೇನೆ. ನಾನು ಅಪೇಕ್ಷಿತನಲ್ಲ. ಹಾವೇರಿ ಮತ್ತು ಗದಗನ ಎಲ್ಲ ಮುಖಂಡರಿಗೆ ಹೇಳಿದ್ದೇನೆ. ಟಿಕೆಟ್‌ಗಾಗಿ ನಮ್ಮ ನಮ್ಮಲ್ಲೇ ಸ್ಪರ್ಧೆ ಬೇಡ. ಪಕ್ಷ ಯಾರಿಗೆ ಟಿಕೆಟ್ ಕೊಡುತ್ತದೆ. ಅವರ ಪರವಾಗಿ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದಿದ್ದೇನೆ ಎಂದರು.