ಶ್ರೀ ಚಿಕ್ಕಯ್ಯ- ದೊಡ್ಡಯ್ಯ ಕಾರ್ಯಕ್ರಮ ಜ.5, 6ರಂದು

Published on

ಹಾವೇರಿ: ತಾಲೂಕು ಬ್ರಾಹ್ಮಣ ಸಮಾಜ, ಶ್ರೀ ಚಿಕ್ಕಯ್ಯ-ದೊಡ್ಡಯ್ಯ ಸೇವಾ ಸಮಿತಿ ವತಿಯಿಂದ ಜ.5, 6ರಂದು ನಗರದ ಹಾನಗಲ್ಲ ರಸ್ತೆಯಲ್ಲಿನ ಶ್ರೀಕೃಷ್ಣ ಮಂದಿರದ ಶ್ರೀ ಲಕ್ಷ್ಮೀ ನಾರಾಯಣ ಸಭಾಭವನದಲ್ಲಿ ಶ್ರೀ ಚಿಕ್ಕಯ್ಯ-ದೊಡ್ಡಯ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಜ.5ರಂದು ಬೆಳಗ್ಗೆ 8ಕ್ಕೆ ಮೆರವಣಿಗೆಯ ಮೂಲಕ ಸ್ವಾಮಿ ಸ್ವಾಗತಿಸಲಾಗುವುದು. ಬೆಳಗ್ಗೆ 9 ಗಂಟೆಗೆ ಮಾಲತೇಶ ಸ್ವಾಮಿಗೆ ಸಾಮೂಹಿಕ ಭಂಡಾರಾರ್ಚನೆ ನಡೆಯಲಿದೆ. 11 ಗಂಟೆಗೆ ಚಿಕ್ಕಯ್ಯ ದೇವರಿಗೆ ಮಹಾನ್ಯಾಸ ಪೂರ್ವಕ ಲಘು ರುದ್ರಾಭಿಷೇಕ ಪೂಜೆ ಭಂಡಾರ ಅರ್ಚನೆ ನಡೆಯಲಿದೆ. ಸಂಜೆ 5ಕ್ಕೆ ಗಂಗಾಪೂಜೆ, ಮಹಾ ನೈವೇದ್ಯ, ಮಹಾಮಂಗಳಾರತಿ, ಮಹಾ ಪ್ರಸಾದ ನಡೆಯಲಿದೆ. ಜ.6ರಂದು ಬೆಳಗ್ಗೆ 9 ಗಂಟೆಗೆ ಮಲ್ಹಾರಿ ಹೋಮ, 12 ಗಂಟೆಗೆ ಪೂರ್ಣಾಹುತಿ ನಡೆಯಲಿವೆ.

ಅಗಡಿ ಆನಂದವನದ ಶ್ರೀ ಗುರುದತ್ತಮೂರ್ತಿ ಚಕ್ರವರ್ತಿ, ಶ್ರೀ ವಿಶ್ವನಾಥ ಚಕ್ರವರ್ತಿ, ಕರ್ಕಿಹಳ್ಳಿಯ ಶ್ರೀ ಸುರೇಶ ಮಹಾರಾಜ ಸಾನ್ನಿಧ್ಯ ವಹಿಸಲಿದ್ದಾರೆ. ಚೇತನ ವಸಂತ ಜೋಶಿ ಹಾಗೂ ವಿಪ್ರ ವೃಂದದವರು ಪೌರೋಹಿತ್ಯ ವಹಿಸಿಕೊಳ್ಳುವರು. ರಂಗನಾಥಚಾರ್ಯ ಸವಣೂರು, ಹನುಮಂತರಾವ ಕುಲಕರ್ಣಿ, ನೀಲಕಂಠ ನಾಡಿಗೇರ ಅವರನ್ನು ಸನ್ಮಾನಿಸಲಾಗುವುದು. ನಂತರ ಶ್ರೀ ವಿಶ್ವನಾಥ ಚಕ್ರವರ್ತಿಗಳಿಂದ ಆಶೀರ್ವಚನ ನಡೆಯಲಿದೆ. ಮಧ್ಯಾಹ್ನ ಪ್ರಸಾದ ವಿತರಿಸಲಾಗುವುದು ಎಂದು ಸೇವಾ ಸಮಿತಿ ಪ್ರಕಟಣೆಯಲ್ಲಿ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net