

ಹಾವೇರಿ: ಜಿಲ್ಲಾ ಬ್ರಾಹ್ಮಣ ಸಮಾಜ ಹಾಗೂ ಶ್ರೀ ಚಿಕ್ಕಯ್ಯ ದೊಡ್ಡಯ್ಯ ಸೇವಾ ಸಮಿತಿ ಹಾಗೂ ಜಿಲ್ಲಾ ವಿಪ್ರ ಘಟಕದ ವತಿಯಿಂದ ಇಲ್ಲಿನ ಕೃಷ್ಣ ಮಂದಿರದಲ್ಲಿ ಭಾನುವಾರ, ಸೋಮವಾರ ಹಮ್ಮಿಕೊಂಡಿದ್ದ ಚಿಕ್ಕಯ್ಯ-ದೊಡ್ಡಯ್ಯ ಕಾರ್ಯಕ್ರಮ ಸಂಪನ್ನಗೊಂಡಿತು.
ಮಲ್ಲಾರಿ ಹೋಮದ ಪೂರ್ಣಾಹುತಿ ನೆರವೇರಿತು. ಕಾರ್ಯಕ್ರಮದಲ್ಲಿ ವಿಪ್ರ ಸಮಾಜದ ಹಿರಿಯರಾದ ರಂಗನಾಥಾಚಾರ್ಯ ನಾರಾಯಣ ಆಚಾರ್ಯ ಸವಣೂರ, ಹನುಮಂತರಾವ್ ಎಸ್. ಕುಲಕರ್ಣಿ, ನೀಲಕಂಠ ನಾಡಿಗೇರ ಹಾಗೂ ಪುರೋಹಿತ ಚೇತನ ಜೋಶಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ಕಿಹಳ್ಳಿಯ ಸಂತ ಸುರೇಶ ಮಹಾರಾಜರು ಉಪಸ್ಥಿತರಿದ್ದರು. ಅಗಡಿ ಆನಂದ ವನದ ಶ್ರೀ ವಿಶ್ವನಾಥ ಚಕ್ರವರ್ತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಆರತಿ, ಮಹಾ ನೈವೇದ್ಯ ಹಾಗೂ ಪ್ರಸಾದ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ಶ್ರೀ ಮೈಲಾರಲಿಂಗೇಶ್ವರ ದೇವರ ಭಕ್ತರು ಹಾಗೂ ವಿಪ್ರ ಯುವ ಘಟಕ, ತಾಲೂಕು ಹಾಗೂ ಜಿಲ್ಲಾ ಬ್ರಾಹ್ಮಣ ಸಮಾಜದ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.