ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ದಕ್ಕೆ; ಸಿದ್ದರಾಜ ಕಲಕೋಟಿ

5 HVR 6
Published on

ಹಾವೇರಿ: ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ದಕ್ಕೆ ಉಂಟಾಗುತ್ತಿದ್ದು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯಬಾರದು. ಪರಿಸರ ಉಳಿಸಲು ಪ್ರಮುಖವಾಗಿ ಗಿಡ- ಮರಗಳನ್ನು ಹೆಚ್ಚಾಗಿ ಬೆಳೆಸಬೇಕು ಎಂದು ಬಿ.ಎಂ. ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ ಮಕ್ಕಳಿಗೆ ಕರೆ ನೀಡಿದರು.

ದೇವಗಿರಿಯ ಬಿ.ಎಂ. ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲೆಯ ಆವರಣದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಗುರುವಾರ ಸಸಿ ನೆಟ್ಟು, ನಂತರ ಅವರು ಮಾತನಾಡಿದರು. ಮಕ್ಕಳು ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಈ ಪರಿಪಾಠವನ್ನು ಮನೆಯಿಂದಲೇ ಪ್ರಾರಂಭವಾಗಬೇಕು ಎಂದರು.

ಶಾಲಾ ಮಕ್ಕಳು, ಶಿಕ್ಷಕರು ವಿವಿಧ ಸಸಿಗಳನ್ನು ನೆಟ್ಟು, ನೀರುಣಿಸಿದರು. ವಿದ್ಯಾರ್ಥಿಗಳಾದ ಪೃಥ್ವಿಕ್ ಹಾವನೂರ, ದೀಕ್ಷಿತಾ ಎಸ್. ಕಲಕೋಟಿ ಪರಿಸರ ದಿನಾಚರಣೆ ಕುರಿತು ಮಾತನಾಡಿದರು. ಪ್ರಾಂಶುಪಾಲ ಗಣೇಶ ಎಂ., ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net