ಬಿಎಂಐಪಿ ಶಾಲೆಯ ವಾರ್ಷಿಕೋತ್ಸವ ನಾಳೆ

Published on

ಹಾವೇರಿ: ಇಲ್ಲಿನ ಹಾವೇರಿ- ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಬಿಎಂ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಜ.6ರಂದು ಸಂಜೆ 4.30ಕ್ಕೆ ‘ಬ್ಲೂಮಿಂಗ್ ಬಡ್ಸ್’ ಹೆಸರಿನ ಶಾಲಾ ವಾರ್ಷಿಕೋತ್ಸವ ಸಮಾರಂಭ ಜರುಗಲಿದೆ.
ಹೆಸ್ಕಾಂ ನಿವೃತ್ತ ಎಇಇ ವಿಜಯಕುಮಾರ ಮುದಕಣ್ಣನವರ, ಡಾ.ಮೃತ್ಯುಂಜಯ ತುರಕಾಣಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೆಎಲ್‌ಎಸ್ ಟ್ರಸ್ಟ್‌ನ ಚೇರ್ಮನ್ ಪ್ರೊ.ನಾಗರಾಜ ಎಂ. ಅಧ್ಯಕ್ಷತೆ ವಹಿಸುವರು. ನಿವೃತ್ತ ಐಪಿಎಸ್ ಅಧಿಕಾರಿ, ಟ್ರಸ್ಟಿ ಎಂ.ಆರ್.ಪೂಜಾರ, ಡಾ.ಮಂಜುನಾಥ ಕೆ.ವಿ., ಎ.ಎಂ.ಭಾಸ್ಕರ, ಸಂಸ್ಥೆಯ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ, ಚಿಕ್ಕಯ್ಯ, ಚನ್ನೇಗೌಡ, ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಸಮಾರಂಭದ ನಂತರ ಶಾಲಾ ಮಕ್ಕಳಿಂದ ವಿಶೇಷ ನೃತ್ಯ ರೂಪಕಗಳ ಪ್ರದರ್ಶನ ಜರುಗಲಿದೆ ಎಂದು ಪ್ರಾಂಶುಪಾಲ ಗಣೇಶ ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net