

ಹಾವೇರಿ: ಬಿ.ಎಂ. ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಕನಕ ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಡಾ.ಮಾ.ನಾಗರಾಜ ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರರ ಹೋರಾಟದಿಂದ ಸ್ವಾತಂತ್ರೃ ಲಭಿಸಿದೆ. ಈ ದಿನದಂದೇ ಜನಿಸಿರುವ ಕಿತ್ತೂರ ರಾಣಿ ಚೆನ್ನಮ್ಮಳ ಬಂಟ ಸಂಗೊಳ್ಳಿ ರಾಯಣ್ಣ ಅವರ ಜೀವನದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕೆಂದರು.
ಸಂಸ್ಥೆಯ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹದೇವಪ್ಪ ಹಾಗೂ ಗುದ್ಲೆಪ್ಪ ಹಳ್ಳಿಕೇರಿ ಅವರನ್ನು ಸ್ಮರಿಸಿದರು.
ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಹತ್ತಾರು ಮಕ್ಕಳು ಸ್ವಾತಂತ್ರೃ ವೀರರ ವೇಷಭೂಷಣದಲ್ಲಿ ಗಮನ ಸೆಳೆದರು.
ಉದ್ಯಮಿ ರಾಜಶೇಖರ ಪಾಟೀಲ, ಕೆನರಾ ಬ್ಯಾಂಕ್ ಹಾವೇರಿ ಶಾಖೆಯ ಮ್ಯಾನೇಜರ್ ವಿಜಯ ನಾಯಕ್, ಪ್ರಾಂಶುಪಾಲ ಗಣೇಶ ಎಂ., ಉಪನ್ಯಾಸಕರು, ಸಿಬ್ಬಂದಿ, ಮಕ್ಕಳು, ಪಾಲಕರು ಪಾಲ್ಗೊಂಡಿದ್ದರು.
ಕೀರ್ತಿ ಎಂ.ಬಿ. ಸ್ವಾಗತಿಸಿದರು. ಮಮತಾ ತಡಪಟ್ಟಿ ನಿರೂಪಿಸಿದರು. ನಾಗರಾಜ ಶೆಟ್ಟರ್ ವಂದಿಸಿದರು.