

ಹಾವೇರಿ: ಜಗತ್ತಿಗೆ ಯೋಗದ ಮೂಲಕ ಆರೋಗ್ಯದ ಕೊಡುಗೆಯನ್ನು ಕೊಟ್ಟಿರುವ ಭಾರತದ ಕೊಡುಗೆ ಅಪಾರವಾದದ್ದು. ಯೋಗದ ಕುರಿತು ವಿಶ್ವಕ್ಕೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮ ಇದಾಗಿದ್ದು, ಯೋಗದ ಮೂಲಕ ಜಗತ್ತಿನ ಜನಕ್ಕೆ ಆರೋಗ್ಯವನ್ನು ಒದಗಿಸುವಲ್ಲಿ ಭಾರತ ಅಗ್ರಸ್ಥಾನದಲ್ಲಿ ನಿಂತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಹೇಳಿದರು.
ನಗರದ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜಗತ್ತಿನ ಎಲ್ಲ ರಾಷ್ಟ್ರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನಾಚರಣೆಗೆ ಮೆರುಗು ತಂದಿದ್ದಾರೆ. ವಸುದೈವ ಕುಟುಂಬಕಂ ಎಂಬ ಧ್ಯೇಯ ವಾಕ್ಯದಡಿ ಮೋದಿ ಅವರು ವಿಶ್ವದ ಎಲ್ಲ ರಾಷ್ಟ್ರಗಳ ಆರೋಗ್ಯದ ಕಾಳಜಿಗಾಗಿ ಈ ದಿನ ಆಚರಿಸುತ್ತಿದ್ದಾರೆ. ಇದು ಸಮಸ್ತ ಭಾರತೀಯರಿಗೆ ಹೆಮ್ಮೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ, ಹಾವೇರಿ ನಗರ ಮಂಡಲ ಅಧ್ಯಕ್ಷ ಗಿರೀಶ ತುಪ್ಪದ, ಜಿಲ್ಲಾ ವಕ್ತಾರ ಪ್ರಭು ಹಿಟ್ನಳ್ಳಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ರಮೇಶ ಪಾಲನಕರ, ಅಲ್ಲಾಭಕ್ಷ ತಿಮ್ಮಾಪೂರ, ನಂಜುಂಡೇಶ ಕಳ್ಳೇರ, ರಮೇಶ ಬಳ್ಳಾರಿ, ಕರಬಸಪ್ಪ ಹಳದೂರ, ಶಿವಯೋಗಿ ಹುಲಿಕಂತಿಮಠ, ಮಂಜುನಾಥ ತಾಂಡೂರ, ವಿವೇಕಾನಂದ ಇಂಗಳಗಿ, ಇಸೂಪಲಿ ಕರ್ಜಗಿ, ಧರ್ಮರಾಜ ಕಜೂರಕರ, ಗಿರೀಶ ಶೆಟ್ಟರ, ಇತರರು ಪಾಲ್ಗೊಂಡಿದ್ದರು.