ಹಾವೇರಿ: ರಾಜ್ಯ ಬಿಜೆಪಿಯ ನಮ್ಮ ಭೂಮಿ ನಮ್ಮ ಹಕ್ಕು ಹೋರಾಟದ ರಾಜ್ಯ ಪ್ರವಾಸ ತಂಡ ಡಿ.4ರಂದು ಸಂಜೆ 4 ಗಂಟೆಗೆ ಜಿಲ್ಲೆಯ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಹೆಡಿಗೊಂಡ ಗ್ರಾಮಕ್ಕೆ ಭೇಟಿ ನೀಡಲಿದೆ.
ತಂಡದ ಸಂಚಾಲಕ ಸುನೀಲಕುಮಾರ ನೇತೃತ್ವದ ತಂಡ ಆಗಮಿಸಿ, ವಕ್ಫ್ ಮಂಡಳಿ ಆಚಾತುರ್ಯದಿಂದ ಭೂಮಿ ಕಳೆದುಕೊಂಡ ರೈತರ ಭೂಮಿಗೆ ಬೇಟಿ ನೀಡಿ ಅಹವಾಲು ಸ್ವೀಕರಿಸಲಿದೆ. ಜಿಲ್ಲೆಯ ಮಾಜಿ ಶಾಸಕರು, ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಪ್ರಕಟಣೆ ತಿಳಿಸಿದೆ.