ನರೇಂದ್ರ ಮೋದಿ ಆಡಳಿತ ದೇಶದ ಅಮೃತ ಕಾಲ; ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಹೇಳಿಕೆ

20 HVR 4 A
Published on

ಹಾವೇರಿ: ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತೇ ಭಾರತದತ್ತ ನೋಡುವಂತೆ ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ದಿದ್ದಾರೆ. ಅವರ ನೇತೃತ್ವದ ಕೇಂದ್ರ ಸರ್ಕಾರದ 11 ವರ್ಷಗಳ ಸಾಧನೆ ಭಾರತದ ಇತಿಹಾಸದಲ್ಲಿ ವಿಕಸಿತ ಭಾರತವಾಗಿದೆ. ಇದು ದೇಶದ ಮಟ್ಟಿಗೆ ಅಮೃತ ಕಾಲ ಎಂದು ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷ ಹಾಗೂ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.

ಬಿಜೆಪಿ ಜಿಲ್ಲಾ ಘಟಕದಿಂದ ಇಲ್ಲಿನ ಬಸವೇಶ್ವರ ನಗರ ಸಿ ಬ್ಲಾಕ್ ಗಣೇಶ ದೇವಸ್ಥಾನ ಹತ್ತಿರ ಕಿತ್ತೂರು ರಾಣಿ ಚನ್ನಮ್ಮ ಉದ್ಯಾನವನ ಸೇರಿದಂತೆ ವಿವಿಧೆಡೆ ಶುಕ್ರವಾರ ವಿಕಸಿತ ಭಾರತ ಕಾರ್ಯಕ್ರಮದಡಿಯಲ್ಲಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿಕಸಿತ ಭಾರತಕ್ಕೆ ಪರಿಸರ ಕೊಡುಗೆ ಅನನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಸಿ ನೆಡುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ ಎಂದರು.

ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ನರೇಂದ್ರ ಮೋದಿ ಅವರು ಆಡಳಿತ ಚುಕ್ಕಾಣಿ ಹಿಡಿದ ನಂತರ ದೇಶದಲ್ಲಿ ಸಮಗ್ರ ಬದಲಾವಣೆಗಳು ಕಾಣಲಾರಂಭಿಸಿವೆ. ಐದಾರು ದಶಕಗಳಿಂದ ದೇಶವನ್ನು ನರಳುವಂತೆ ಮಾಡಿದ್ದ ಭಯೋತ್ಪಾದನೆ ಮತ್ತು ಅದಕ್ಕೆ ನೆಲೆಯಾಗಿದ್ದ ಕಾಶ್ಮೀರದಲ್ಲಿ 370ರ ರದ್ಧತಿ ಮೂಲಕ ದೇಶವನ್ನು ಸುರಕ್ಷತೆಗೆ ಸಜ್ಜುಗೊಳಿಸಿದ್ದಾರೆ. ಅಲ್ಲದೇ ದೇಶದ ಮೇಲೆ ಭಯೋತ್ಪಾದನೆಯ ನೆರಳು ಬೀಳದಂತೆ ನೋಡಿಕೊಂಡಿದ್ದು, ಅಂಥ ಪ್ರಯತ್ನ ಮಾಡಿದವರಿಗೆ ಏರ್ ಸ್ಟ್ರೈಕ್ ಮತ್ತು ಇತ್ತೀಚಿನ ದಿನಗಳಲ್ಲಿ ಆದ ಆಪರೇಷನ್ ಸಿಂಧೂರ ಮೂಲಕ ತಕ್ಕ ಉತ್ತರ ನೀಡಿದ್ದಾರೆ ಎಂದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಪ್ರಧಾನ ಕಾರ್ಯದರ್ಶಿಗಳಾದ ನಂಜುಂಡೇಶ ಕಳ್ಳೇರ, ಡಾ.ಸಂತೋಷ ಆಲದಕಟ್ಟಿ, ವೆಂಕಟೇಶ ನಾರಾಯಣಿ, ಪ್ರಮುಖರಾದ ಗವಿಸಿದ್ದಪ್ಪ ದ್ಯಾಮಣ್ಣನವರ, ಗಿರೀಶ ತುಪ್ಪದ, ನಾಗೇಂದ್ರ ಕಟಕೋಳ, ಪರಮೇಶಪ್ಪ ಮೇಗಳಮನಿ, ನಗರಸಭೆ ಸದಸ್ಯರಾದ ಶಿವಯೋಗಿ ಹುಲಿಕಂತಿಮಠ, ಚನ್ನಮ್ಮ ಬ್ಯಾಡಗಿ, ಕೆ.ಬಿ ಮಲ್ಲಿಕಾರ್ಜುನ, ಕಿರಣ ಕೋಣನವರ, ರುದ್ರೇಶ ಚಿನ್ನಣ್ಣವರ, ಮಂಜುನಾಥ ಮಡಿವಾಳರ, ಲಲಿತಾ ಗುಂಡೇನಳ್ಳಿ, ರಾಜೇಶ್ವರಿ ವಿಷ್ಣುಗೌಡ್ರು, ರೋಹಿಣಿ ಪಾಟೀಲ, ಲತಾ ಬಡ್ನಿಮಠ, ಚನ್ನಮ್ಮ ಪಾಟೀಲ, ನಾಗರಾಜ ಹರಿಗೋಲ, ಮಹಾಲಿಂಗಯ್ಯ ಹಿರೇಮಠ, ಗಿರೀಶ ಶೆಟ್ಟರ, ನಿಖಿಲ್ ಡೊಗ್ಗಳ್ಳಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net