ಹಾವೇರಿ ಶಿವ ಪಾರ್ಕ್ ನಲ್ಲಿ ಸ್ವಚ್ಛತೀರ್ಥ ಅಭಿಯಾನ

21 HVR 3
Published on

ಹಾವೇರಿ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ದೇವಸ್ಥಾನಗಳ ಸ್ವಚ್ಛತೀರ್ಥ ಅಭಿಯಾನದ ಅಂಗವಾಗಿ ಶನಿವಾರ ಬಿಜೆಪಿ ನಗರ ಮಂಡಲದ ವತಿಯಿಂದ ಅಶ್ವಿನಿ ನಗರದ ಶಿವ ಪಾರ್ಕ್ ಹಾಗೂ ಶಿವನ ಮಂದಿರವನ್ನು ಸ್ವಚ್ಛಗೊಳಿಸಲಾಯಿತು. ನಿಕಟ ಪೂರ್ವ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಜಿಲ್ಲಾ ಮಾಧ್ಯಮ ಸಂಚಾಲಕ ಕಿರಣಕುಮಾರ ಕೋಣನವರ, ಯುವ ಜಿಲ್ಲಾ ಮೋರ್ಚಾ ಕಾರ್ಯದರ್ಶಿ ಅಭಿಷೇಕ ಬ್ಯಾಡಗಿ, ಯುವ ಮೋರ್ಚಾ ನಗರ ಮಂಡಲ ಅಧ್ಯಕ್ಷ ಅಭಿಷೇಕ ಗುಡಗೂರ, ಅಡವಯ್ಯ ಯಲವಗಿಮಠ, ರಾಹುಲ್‌ಕುಮಾರ ನವಲೆ, ವಿನಯಕುಮಾರ ತಹಸಿಲ್ದಾರ್, ಚೇತನ ಬಂಡಿವಡ್ದರ, ಮನೋಜ್ ಜಾಧವ, ವಿವೇಕಾನಂದ ಇಂಗಳಗಿ, ಪ್ರಶಾಂತ ಕೊಡತ್ಕರ, ಗುಡ್ಡಪ್ಪ ಬರಡಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net