

ಹಾವೇರಿ: ಜಿಲ್ಲೆಯಾದ್ಯಂತ ನಡೆಯುತ್ತಿರುವ ಮಹಿಳಾ ದೌಜ್ಯನ್ಯ ಪ್ರಕರಣಗಳು ಹಾಗೂ ಶೋಷಣೆಗೆ ಒಳಗಾಗುತ್ತಿರುವ ಜಿಲ್ಲೆಯ ಮಹಿಳೆಯರ ರಕ್ಷಣೆಗಾಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಾವೇರಿ ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಅವರು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರಿಗೆ ಮನವಿ ಪತ್ರ ಸಲ್ಲಿದರು. ಮುಖ್ಯವಾಗಿ ಹಾನಗಲ್ಲ ತಾಲೂಕಿನ ಬ್ಯಾಗವಾದಿ ಗ್ರಾಮದ ಘಟನೆಯ ಬಗ್ಗೆ ಸಮಗ್ರ ತನಿಖೆ ಮಾಡಿ, ತಪ್ಪಿತಸ್ಥರ ಬಂಧಿಸುವಂತೆ ಒತ್ತಾಯಿಸಿದರು. ಪ್ರಮುಖರಾದ ನಾಗೇಂದ್ರ ಕಡಕೋಳ, ನಂಜುಂಡೇಶ ಕಳ್ಳೇರ, ಪ್ರದೀಪ ಮುಳ್ಳೂರ, ಗಿರೀಶ ತುಪ್ಪದ, ವೆಂಕಟೇಶ ನಾರಾಯಣಿ, ಸುಭಾಷ ಹಿರೆತನದ, ಕೃಷ್ಣಾ ಲಮಾಣಿ, ಇತರರಿದ್ದರು.