

ಹಾವೇರಿ: ಸರ್ವರಿಗೂ ಸಮಬಾಳು, ಸಮಪಾಲು ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಸರ್ವ ಪಾಲನ್ನೂ ಒಂದೇ ಸಮುದಾಯಕ್ಕೆ ಕೊಟ್ಟಿದ್ದಾರೆ. ಒಂದು ಸಮುದಾಯದ ಮತ ಸೆಳೆಯುವ ಸಲುವಾಗಿ ಅವರಿಗೆ ಹೆಚ್ಚು ಹಣ ಕೊಟ್ಟು ಉಳಿದವರಿಗೆ ಅನ್ಯಾಯ ಮಾಡಿದ್ದಾರೆ. 1.16 ಸಾವಿರ ಕೋಟಿ ರೂ. ಸಾಲ ಮಾಡಿ ಆರ್ಥಿಕವಾಗಿ ದಿವಾಳಿ ಮಾಡಿರುವ ದಿವಾಳಿ ಸರ್ಕಾರ ಇದು ಎಂದು ಮಾಜಿ ಸಚಿವ ಬಿ.ಸಿ ಪಾಟೀಲ ಆರೋಪಿಸಿದರು.
ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸೋಮವಾರ ರಾಜ್ಯ ಸರ್ಕಾರದ 16ನೇ ಬಜೆಟ್ ಖಂಡಿಸಿ ಜಿಲ್ಲಾ ಬಿಜೆಪಿ ಘಟಕದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 34 ಸಾವಿರ ಕೋಟಿ ಗುತ್ತಿಗೆ ಹಣ ಉಳಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರ 80 ಪರ್ಸೆಂಟ್ ಸರ್ಕಾರವಾಗಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರಿಗೆ, ರೈತ ಸಮುದಾಯಕ್ಕೆ ಏನೂ ಕೊಟ್ಟಿಲ್ಲ. ಅದರಲ್ಲೂ ವಿಶೇಷವಾಗಿ ಹಾವೇರಿ ಜಿಲ್ಲೆಗೆ ಚಿಪ್ಪು ಕೊಟ್ಟಿದ್ದಾರೆ. ಅಭಿವೃದ್ಧಿಗೆ ಯಾವುದೇ ಹಣ ಕೊಟ್ಟಿಲ್ಲ. ಜಿಲ್ಲೆಯಲ್ಲಿ ಆರು ಕಾಂಗ್ರೆಸ್ ಶಾಸಕರು ಇದ್ದರೂ ಯಾವುದೇ ಅನುದಾನ ತರುವಲ್ಲಿ ವಿಫಲವಾಗಿದ್ದಾರೆ. ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರಕ್ಕೆ ನಮ್ಮ ಸರ್ಕಾರದ ಅವಧಿಯಲ್ಲಿ 25 ಕೋಟಿ ರೂ. ಕೊಟ್ಟಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 25 ಕೋಟಿ ವಾಪಸ್ ಪಡೆದಿದೆ ಎಂದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಶಿವರಾಜ ಸಜ್ಜನರ, ನಿಕಟಪೂರ್ವ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಪ್ರಮುಖರಾದ ಭೋಜರಾಜ ಕರೂದಿ, ಗವಿಸಿದ್ದಪ್ಪ ದ್ಯಾಮಣ್ಣನವರ, ನಂಜುಂಡೇಶ್ವರ ಕಳ್ಳೇರ, ಸಂತೋಷ ಆಲದಕಟ್ಟಿ, ಮಂಜುನಾಥ ಗಾಣಿಗೇರ, ವೆಂಕಟೇಶ ನಾರಾಯಣಿ, ಶಿವಲಿಂಗಪ್ಪ ತಲ್ಲೂರು, ಮಂಜುನಾಥ ಗಾಣಿಗೇರ, ಕೆ.ಸಿ ಕೋರಿ, ವಿಜಯಕುಮಾರ ಕೂಡ್ಲಪ್ಪನವರ, ಶಿವಯೋಗಿ ಹುಲಿಕಂತಿಮಠ, ನೀಲಪ್ಪ ಚಾವಡಿ, ಪ್ರಭು ಹಿಟ್ನಳ್ಳಿ, ರುದ್ರೇಶ ಚಿನನ್ನಣ್ಣನವರ, ನಾಗೇಂದ್ರ ಕಡಕೋಳ, ಮಂಜುನಾಥ ಮಡಿವಾಳರ, ಹನುಮಂತ ದ್ಳಾುಮಂತ ದಾಸರ, ಲಲಿತಾ ಗುಂಡೇನಹಳ್ಳಿ, ಪುಷ್ಪಾ ಚಕ್ರಸಾಲಿ, ಸುಜಾತಾ ಆರಾಧ್ಯಮಠ, ಅಕ್ಷತಾ ಮಾಳಗಿಮನಿ, ವಿದ್ಯಾ ಶೆಟ್ಟಿ, ಕಾರ್ಯಕರ್ತರು ಹಾಜರಿದ್ದರು.