ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಆಕ್ರೋಶ; ಬಿಜೆಪಿ ಹಾವೇರಿ ನಗರ, ಗ್ರಾಮೀಣ ಮಂಡಲದಿಂದ ಪ್ರತಿಭಟನೆ

20 HVR 2 B
Published on

ಹಾವೇರಿ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಹಾವೇರಿ ನಗರ, ಗ್ರಾಮೀಣ ಮಂಡಲದ ವತಿಯಿಂದ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರ್ಕಾರ ಮೋಸದ ಗ್ಯಾರಂಟಿಗಳಿಂದ ನಡೆಯುತ್ತಿದೆ. ಎಲ್ಲ ಸಮುದಾಯಗಳ ಅನುದಾನ ಕಡಿತಗೊಳಿಸಿ ಇಲಾಖೆಗಳ ಹಣ ಲಪಾಟಯಿಸಲು ಮುಂದಾಗಿದೆ. ದಿನೇ ದಿನೆ ಕಾಂಗ್ರೆಸ್ಸಿನ ಭಾಗ್ಯಗಳು ತುಟ್ಟಿ ಭಾಗ್ಯಗಳಾಗಿ ಮಾರ್ಪಡುತ್ತಿವೆ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದ ಅನೇಕ ಮಧ್ಯಮ ವರ್ಗದವರಿಗೆ ಮತ್ತು ಬಡವರಿಗೆ ಸಾಕಷ್ಟು ಅನಾನುಕುಲ ಆಗಿದೆ. ಬಡವರು, ಹಿಂದುಳಿದ ವರ್ಗದವರು, ದೀನ ದಲಿತರ ಜೀವನವನ್ನು ಸುಧಾರಿಸುವ ಬದಲು, ಬೆಲೆ ಏರಿಕೆ ಮಾಡುವ ಮೂಲಕ ಅವರಿಗೆ ಹೆಚ್ಚಿನ ಅನಾನುಕುಲ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಶಿವರಾಜ ಸಜ್ಜನರ, ಜಿಲ್ಲಾ ಉಪಾಧ್ಯಕ್ಷ ಸುರೇಶ ಹೊಸಮನಿ ಮತ್ತು ಗ್ರಾಮೀಣ ಮಂಡಲ ಅಧ್ಯಕ್ಷ ಬಸವರಾಜ ಕಳಸೂರ, ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿದರು.
ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಸಿದ್ದರಾಜ ಕಲಕೋಟಿ, ಹಾವೇರಿ ನಗರ ಮಂಡಲದ ಅಧ್ಯಕ್ಷ ಗಿರೀಶ ತುಪ್ಪದ, ಹಾವೇರಿ ಗ್ರಾಮೀಣ ಮಂಡಲ ಅಧ್ಯಕ್ಷ ಬಸವರಾಜ ಕಳಸೂರ, ನಗರ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ ಉಜನಿಕೊಪ್ಪ, ಗುಡ್ಡಪ್ಪ ಭರಡಿ, ಗ್ರಾಮೀಣ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರಾಜಾರಾಮ ಕುಲಕರ್ಣಿ, ಸತೀಶ ಗೌಳಿ, ಲಲಿತಾ ಗುಂಡೇನಹಳ್ಳಿ, ಲತಾ ಬಡ್ನಿಮಠ, ಚನ್ನಮ್ಮ ಬ್ಯಾಡಗಿ, ಚನ್ನಮ್ಮ ಪಾಟೀಲ, ಪುಷ್ಪಾ ಚಕ್ರಸಾಲಿ, ಅನೀತಾ ಹಬೀಬ, ಪರಮೇಶಪ್ಪ ಮ್ಯಾಗಳಮನಿ, ರುದ್ರೇಶ ಚಿನ್ನಣ್ಣನವರ, ನಾಗರಾಜ ಹರಿಗೋಲ, ಜಗದೀಶ ಮಲಗೋಡ, ಶಿವಯೋಗಿ ಹುಲಿಕಂತಿಮಠ, ಅಡವಯ್ಯ ಯಲುಗಿಮಠ, ಮಲ್ಲಿಕಾರ್ಜು ಕಟ್ಟಿಮನಿ, ಮಾಲಿಂಗಯ್ಯ ಹಿರೇಮಠ, ಶಿವಾನಂದ ಸುರಳಿಹಳ್ಳಿ, ಆನಂದ ಕಲಾಲ, ಅಭಿಷೇಕ ಗುಡಗೂರ, ಹನುಮಂತನಾಯ್ಕ ಬಾದಾಮಿ, ಶಂಭು ಹತ್ತಿ, ಮಂಜುನಾಥ ತಾಂಡೂರ, ಮಹಾವೀರ ಘನಾತೆ, ಜಗದೀಶ ಕನವಳ್ಳಿ, ಹನುಮಂತ ದಾಸರ, ಜಯಪ್ಪ ದೇಸಳ್ಳಿ, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net