ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ ಧೀಮಂತ ಕನಕದಾಸರು; ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ನೀಲಪ್ಪ ಚಾವಡಿ ಹೇಳಿಕೆ; ದಾಸ ಶ್ರೇಷ್ಠ ಭಕ್ತ ಕನಕದಾಸ ಜಯಂತ್ಯುತ್ಸವ

18 HVR 6
Published on

ಹಾವೇರಿ: ಜಾತಿ ವ್ಯವಸ್ಥೆಗಳು, ಮೂಢನಂಬಿಕೆಗಳು ಉತ್ತುಂಗದಲ್ಲಿ ಇದ್ದಾಗ ಕನಕದಾಸರು ಭಕ್ತಿ ಮತ್ತು ಶ್ರದ್ಧೆಯಿಂದ ಭಗವಂತನನ್ನು ಒಲಿಸಿಕೊಂಡರು. ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿದ್ದ ಅನಿಷ್ಠ ಪದ್ಧತಿಗಳು, ಕೆಟ್ಟ ಸಂಪ್ರದಾಯಗಳನ್ನು ನಿರ್ಮೂಲನೆ ಮಾಡಲು ಜೀವನದುದ್ದಕ್ಕೂ ಶ್ರಮಿಸಿದರು ಎಂದು ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ನೀಲಪ್ಪ ಚಾವಡಿ ಹೇಳಿದರು.

ನಗರದ ಬಿಜೆಪಿ ಜಿಲ್ಲಾ ಕಾರ್ಯಲಯದಲ್ಲಿ ಜಿಲ್ಲಾ ಒಬಿಸಿ ಮೋರ್ಚಾ ವತಿಯಿಂದ ಸೋಮವಾರ ಆಯೋಜಿಸಿದ್ದ ದಾಸಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.

ಕನಕದಾಸರ ನಡೆ, ನುಡಿ ಹಾಗೂ ಜೀವನ ಎಲ್ಲರಿಗೂ ಆದರ್ಶವಾಗಿದೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ 1509ರಲ್ಲಿ ಕುರುಬ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಯ ಮಗನಾಗಿ ಕನಕದಾಸರು ಜನಿಸಿದರು. ತಮ್ಮ ಕೀರ್ತನೆಗಳಲ್ಲಿ ಭಕ್ತಿ, ವೈರಾಗ್ಯ, ಭಜನೆಗಳಷ್ಟೇ ಅಲ್ಲದೇ ಹದಿನಾರನೆಯ ಶತಮಾನದ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಸಮರ ಸಾರಿದರು. ಸಾಮಾಜಿಕ ಮಡಿವಂತಿಕೆಯನ್ನು ಕುರಿತು ತಮ್ಮ ಕೀರ್ತನೆಗಳಲ್ಲಿ ವಿಡಂಬಿಸಿದ್ದಾರೆ ಎಂದು ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಸಂತೋಷ ಆಲದಕಟ್ಟಿ ಮಾತನಾಡಿ, ಸಂತ ಕನಕದಾಸರು ತಮ್ಮ ಕಿರ್ತನೆಯ ಮೂಲಕ ಜನರನ್ನು ಬಡದೆಬ್ಬಿಸಿ ಸಮಾಜಕ್ಕಾಗಿ ಸೇವೆ ಮಾಡಲು ಪ್ರೇರೇಪಿಸಿದರು. ಇತ್ತೀಚಿನ ದಿನಗಳಲ್ಲಿ ಸಂತರನ್ನು ಅವರ ಜಾತಿಗಳನ್ನು ಗುರುತಿಸಿ ಅವರನ್ನು ಒಂದೇ ಜಾತಿಗೆ ಸೀಮಿತಗೊಳಿಸಿತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದರು.

ಜಿಲ್ಲಾ ಉಪಾಧ್ಯಕ್ಷ ಸುರೇಶ ಹೊಸಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ, ಪ್ರಮುಖರಾದ ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿದರು.

ಜಿಲ್ಲಾ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಹುಲಗೂರ, ವಿನಯ ತಳಗೇರಿ, ರಮೇಶ ಪಾಲನಕರ, ಪ್ರಭು ಹಿಟ್ನಳ್ಳಿ, ಜಗದೀಶ ಕನವಳ್ಳಿ, ಶಿವಯೋಗಿ ಹುಲಿಕಂತಿಮಠ, ಗುಡ್ಡಪ್ಪ ಭರಡಿ, ಪ್ರಕಾಶ ಉಜನಿಕೊಪ್ಪ, ರುದ್ರೇಶ ಚಿನ್ನಣ್ಣವನರ, ವಿಜಯಕುಮಾರ ಚಿನ್ನಿಕಟ್ಟಿ, ಶಂಭು ಹತ್ತಿ, ವಿರುಪಾಕ್ಷಪ್ಪ ತಲ್ಲೂರ, ನಾಗರಾಜ ಹಾರುಗೋಲ, ಚನ್ನಮ್ಮ ಪಾಟೀಲ, ರೋಹಿಣಿ ಪಾಟೀಲ, ಪುಷ್ಪಾ ಚಕ್ರಸಾಲಿ, ಚನ್ನಮ್ಮ ಪಾಟೀಲ, ಭಾಗ್ಯಶ್ರೀ ಮೋರೆ, ರೇಣುಕಾ ಗೌಳಿ, ರಾಮಕ್ಕ ಮುತ್ತಳ್ಳಿ, ಸುಂಮಗಲಾ ಚನ್ನಿವೀರಗೌಡ್ರ, ಶೋಭಾ ಜಗತಾಪ, ಪಕ್ಕಿರೇಶ ಹಾವನೂರ, ಗಿರೀಶ ಶೆಟ್ಟರ, ಪ್ರಕಾಶ ಬಂಡಿವಡ್ಡರ, ಸುಭಾಷ ದಿಡಗಣ್ಣಿ, ಮಲ್ಲೇಶ ತಳವಾರ, ರವಿ ವಡ್ಡರ, ಗಜಾನನ ರಾಸಿನಕರ, ರಘು ಮತ್ತಿಹಳ್ಳಿ, ವಿಜಯಕುಮಾರ ಕುಡ್ಲಪ್ಪನವರ, ಗಿರೀಶ ಶೆಟ್ಟರ, ಅಡವಯ್ಯ ಯಲುವಿಗಿಮಠ, ವೈ.ಎ.ಮಡಿವಾಳರ, ಮುತ್ತುಣ್ಣ ಮುಷ್ಠಿ, ಆನಂದ ಮಿಸಿಹೊನ್ನಪ್ಪನವರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net