ಹಾವೇರಿ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಗುರು ಪೂರ್ಣಿಮೆ

10 HVR 8
Published on

ಹಾವೇರಿ: ನಗರದ ಕಾಗಿನೆಲೆ ರಸ್ತೆಯ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯಾಲಯದಲ್ಲಿ ಗುರುವಾರ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಅವರ ಪಾದಪೂಜೆ ಮಾಡುವ ಮೂಲಕ ಗುರುಪೂರ್ಣಿಮೆ ಆಚರಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಶ್ರೀಗಳ ಪಾದಪೂಜೆ ನೆರವೇರಿಸಿ, ಆಶೀರ್ವಾದ ಪಡೆದರು.

ನಂತರ ಮಾತನಾಡಿದ ಶ್ರೀಗಳು, ಗುರುವಿನ ಅರ್ಥವನ್ನು ಭಾರತೀಯರು ಚೆನ್ನಾಗಿ ಅರಿತಿರುವ ಕಾರಣ ಭಾರತದ ಪರಂಪರೆಯಲ್ಲಿ ಇಂದಿಗೂ ಗುರುವಿನ ಸ್ಮರಣೆ ಹಾಗೂ ಪೂಜಾ ವಿಧಾನಗಳು ಜೀವಂತವಾಗಿವೆ. ಒಂದು ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಗುರುವಿನ ಸ್ಮರಣೆ ಮಾಡುವುದು ನನಗೆ ಅತೀವ ಸಂತೋಷ ತಂದಿದೆ. ಎಲ್ಲ ಕಾರ್ಯಕರ್ತರ ಭವಿಷ್ಯ ಉಜ್ವಲಾಗಲಿ ಎಂದು ಆಶೀರ್ವದಿಸಿದರು.

ಮಾಜಿ ಶಾಸಕ ಶಿವರಾಜ ಸಜ್ಜನರ, ಮಾಜಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಪ್ರಮುಖರಾದ ಗವಿಸಿದ್ದಪ್ಪ ದ್ಯಾಮಣ್ಣನವರ, ಬಸವರಾಜ ಕಳಸೂರ, ಎನ್.ಎಂ.ಈಟೇರ, ಕೃಷ್ಣಾ ಸುಣಗಾರ, ನಾಗೇಂದ್ರ ಕಡಕೋಳ, ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ, ವೆಂಕಟೇಶ ನಾರಾಯಣಿ, ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net