ನನ್ನ ಮಣ್ಣು - ನನ್ನ ದೇಶ ಕಾರ್ಯಕ್ರಮಕ್ಕೆ ಚಾಲನೆ

15 HVR 10
Published on

ಹಾವೇರಿ: ಬಿಜೆಪಿ ಹಾವೇರಿ ನಗರ ಮಂಡಲ ವತಿಯಿಂದ ನಗರದ ಹುಕ್ಕೇರಿ ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ನನ್ನ ಮಣ್ಣು- ನನ್ನ ದೇಶ’ ಕಾರ್ಯಕ್ರಮಕ್ಕೆ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಚಾಲನೆ ನೀಡಿದರು.
ನಂತರ ಮಾತನಾಡಿದ ಸ್ವಾಮೀಜಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೆಹಲಿಯ ಕರ್ತವ್ಯ ಪಥದಲ್ಲಿ ಹುತಾತ್ಮರ ಗೌರವಾರ್ಥ ನಿರ್ಮಾಣವಾಗಲಿರುವ ಅಮೃತ ಉದ್ಯಾನವನ ಸ್ಥಳಕ್ಕೆ ನನ್ನ ಮಣ್ಣು - ನನ್ನ ದೇಶ ಅಭಿಯಾನದ ಮೂಲಕ ಭಾರತದ ಪ್ರತಿ ಹಳ್ಳಿಯಿಂದ ಮಣ್ಣನ್ನು ಸಂಗ್ರಹಿಸಿ ಉದ್ಯಾನವನ ನಿರ್ಮಾಣ ಮಾಡುತ್ತಿದ್ದಾರೆ. ನನ್ನ ಮಣ್ಣು - ನನ್ನ ದೇಶ ಎಂಬ ಅಭಿಮಾನ ಸರ್ವರಿಗೂ ಸಲ್ಲಬೇಕು. ನಮ್ಮ ಊರಿನ ಮಣ್ಣು ರಾಷ್ಟ್ರದ ರಾಜಧಾನಿಯಲ್ಲಿ ನಿರ್ಮಾಣಗೊಳ್ಳಲಿರುವ ಅಮೃತ ಉದ್ಯಾನವನ ಸ್ಥಳಕ್ಕೆ ಹೋಗುತ್ತಿರುವುದು ನಮ್ಮ ಊರಿನ ಎಲ್ಲರಿಗೂ ಸಂತಷದ ವಿಷಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ನಗರ ಮಂಡಲ ಅಧ್ಯಕ್ಷ ಗಿರೀಶ ತುಪ್ಪದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರೇಶ ಚಿನ್ನಣ್ಣನವರ, ನಗರದ ಪ್ರಮುಖ ಜಗದೀಶ ಕನವಳ್ಳಿ, ನಜೀರ್ ನದಾಫ್, ಮಹಾಲಿಂಗಸ್ವಾಮಿ ಹಿರೇಮಠ, ನಾಗರಾಜ ಹಾರಿಗೋಲ, ಶಿವಬಸವ ಚೌಶೆಟ್ಟಿ, ರೋಹಿಣಿ ಪಾಟೀಲ, ಲಲಿತಾ ಗುಂಡೇನಹಳ್ಳಿ, ಅಭಿಷೇಕ ಗುಡಗೂರ, ನೀಖಿಲ ಡೊಗ್ಗಳ್ಳಿ, ಗಿರೀಶ ಶೆಟ್ಟರ, ಪವನ ಕಜೂರಕರ, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net