ಬಿಜೆಪಿ ವಿಧಾನಸಭೆ ಕ್ಷೇತ್ರದ ಪ್ರಭಾರಿ, ಸಂಚಾಲಕರ ನೇಮಕ

BJP
Published on

ಹಾವೇರಿ: ಲೋಕಸಭೆ ಚುನಾವಣೆ ನಿಮಿತ್ತ ಬಿಜೆಪಿ ವತಿಯಿಂದ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ಪ್ರಭಾರಿ ಮತ್ತು ಸಂಚಾಲಕರನ್ನು ನೇಮಿಸಿ ಬಿಜೆಪಿ ಜಿಲ್ಲಾ ಘಟಕ ಆದೇಶ ಹೊರಡಿಸಿದೆ.
ಹಾನಗಲ್ಲ ವಿಧಾನಸಭಾ ಕ್ಷೇತ್ರದ ಪ್ರಭಾರಿಯಾಗಿ ರಾಜೇಂದ್ರ ಹಾವೇರಣ್ಣನವರ, ಸಂಚಾಲಕರಾಗಿ ಸೋಮನಗೌಡ ಪಾಟೀಲ, ಹಾವೇರಿ ವಿಧಾನಸಭೆ ಕ್ಷೇತ್ರದ ಪ್ರಭಾರಿಯಾಗಿ ದೀಪಕ ಹರಪನಹಳ್ಳಿ, ಸಂಚಾಲಕರಾಗಿ ಜಗದೀಶ ಮಲಗೋಡ, ಬ್ಯಾಡಗಿ ಕ್ಷೇತ್ರದ ಪ್ರಭಾರಿಯಾಗಿ ಭಾರತಿ ಜಂಬಗಿ, ಸಂಚಾಲಕರಾಗಿ ಉಮೇಶ ರಟ್ಟಿಹಳ್ಳಿ, ಹಿರೇಕೆರೂರ ಕ್ಷೇತ್ರದ ಪ್ರಭಾರಿಯಾಗಿ ಚೋಳಪ್ಪ ಕಸವಾಳ, ಸಂಚಾಲಕರಾಗಿ ಎನ್.ಎಂ.ಈಟೇರ, ರಾಣೆಬೆನ್ನೂರ ಕ್ಷೇತ್ರದ ಪ್ರಭಾರಿಯಾಗಿ ನಾಗೇಂದ್ರ ಕಡಕೋಳ, ಸಂಚಾಲಕರಾಗಿ ಬಸವರಾಜ ಹುಲ್ಲತ್ತಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net