ಸೈನಿಕರ ರಕ್ಷಣೆಗಾಗಿ ಬಿಜೆಪಿ ವಿಶೇಷ ಪ್ರಾರ್ಥನೆ; ಮಾಜಿ ಸೈನಿಕರಿಂದ ಆಪರೇಷನ್ ಸಿಂಧೂರ ಕಾರ್ಯಚರಣೆ ಜೈಕಾರ

9 HVR 6 C
Published on

ಹಾವೇರಿ: ಭಾರತೀಯ ಜನತಾ ಪಾರ್ಟಿ ಜಿಲ್ಲಾ ಘಟಕದ ವತಿಯಿಂದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲ ಯೋಧರ ರಕ್ಷಣೆ ಮತ್ತು ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ನಗರದ ಹೊಸಮನಿ ಸಿದ್ದಪ್ಪ ವೃತ್ತದ ಶ್ರೀ ಗಣೇಶ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಲಾಯಿತು.

ಭಾರತೀಯ ಸೈನಿಕರ ಮನೋಧೈರ್ಯ ಹೆಚ್ಚಿಸಲು ಹಾಗೂ ಅವರ ರಕ್ಷಣೆಗಾಗಿ ಗಣೇಶನಿಗೆ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿ, ಪ್ರಸಾದ ವಿತರಿಸಲಾಯಿತು. ಜಿಲ್ಲೆಯ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್ ಪಾಟೀಲ, ಕೆ.ಸಿ ಕೋರಿ, ಎಲ್.ಸಿ ಮಧುವೇರಿ, ಇತರ ಮಾಜಿ ಸೈನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಾಜಿ ಶಾಸಕ ಶಿವರಾಜ ಸಜ್ಜನರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಂಜುಂಡೇಶ ಕಳ್ಳೇರ, ವೆಂಕಟೇಶ ನಾರಾಯಣಿ, ಸಂತೋಷ ಅಲದಕಟ್ಟಿ, ನಾಗೇಂದ್ರ ಕಡಕೋಳ, ಸುರೇಶ ಹೊಸಮನಿ, ಗಿರೀಶ ತುಪ್ಪದ, ಪ್ರಕಾಶ ವಜನಕೊಪ್ಪ, ಗುಡ್ಡಪ್ಪ ಬರಡಿ, ಲಲಿತಾ ಗುಂಡನಹಳ್ಳಿ, ಚನ್ನಮ್ಮ ಬ್ಯಾಡಗಿ, ಪುಷ್ಪಲತಾ ಚಕ್ರಸಾಲಿ, ರಾಜು ಹರಿಗೋಲ, ಶಂಭುಲಿಂಗಪ್ಪ ಹತ್ತಿ, ಮಂಜುನಾಥ ತಾಂಡೂರ, ಬಸವರಾಜ ಹಾಲಪ್ಪನವರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net