ಬಿ.ವೈ.ವಿಜಯೇಂದ್ರ ಜನ್ಮದಿನದ ನಿಮಿತ್ತ ಸಸಿ ವಿತರಣೆ

7 HVR 3
Published on

ಹಾವೇರಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಜನ್ಮದಿನದ ಅಂಗವಾಗಿ ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಮಂಗಳವಾರ ವಿವಿಧ ಬಗೆಯ ಸಸಿಗಳನ್ನು ವಿತರಿಸಿ, ಬಿಜೆಪಿ ಕಚೇರಿ ಆವರಣದಲ್ಲಿ ಕೆಲ ಸಸಿಗಳನ್ನು ನೆಡಲಾಯಿತು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ ಮಾತನಾಡಿ, ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ನಂತರ ಪಕ್ಷದ ಸಂಘಟನಾತ್ಮಕ ಪ್ರಕ್ರಿಯೆಗಳು ಮತ್ತಷ್ಟು ಚುರುಕಾಗಿವೆ. ಹೆಚ್ಚು ಯುವಕರನ್ನು ಭಾರತೀಯ ಜನತಾ ಪಾರ್ಟಿ ಕಡೆಗೆ ಸೆಳದಿದೆ ಎಂದರು.

ಜಿಲ್ಲಾ ಉಪಾಧ್ಯಕ್ಷ ಸುರೇಶ ಹೊಸಮನಿ, ವೆಂಕಟೇಶ ನಾರಾಯಣಿ ಮತ್ತು ಲಲಿತಾ ಗುಂಡೆನಹಳ್ಳಿ ಮಾತನಾಡಿದರು.

ಈ ಸಂದರ್ಭದಲ್ಲಿ ರಮೇಶ ಪಾಲನಕರ, ಅಭಿಷೇಕ ಗುಡಗೂರ, ಶಿವಯೋಗಿ ಹುಲಿಕಂತಿಮಠ, ಶಂಭುಲಿಂಗ ಹತ್ತಿ, ಹೊನ್ನಪ್ಪ ಅಗಸಿಬಾಗಿಲು, ರೋಹಿಣಿ ಪಾಟೀಲ, ಪುಷ್ಪಾ ಚಕ್ರಸಾಲಿ, ಬಸವಣ್ಣೆವ್ವ ಕನವಳ್ಳಿ, ರಾಮಕ್ಕ ಮುತ್ತಳ್ಳಿ, ಶ್ರೀದೇವಿ ರೆಡ್ಡಿ, ರೇಣುಕಾ ಗೌಳಿ, ಸರೋಜಾ ಜತ್ಲಿ, ಅಕ್ಕಮ್ಮ ಹರ್ತಿ, ಗಿರೀಶ ಶೆಟ್ಟರ, ಬಸವರಾಜ ಗುಂಡೇನಹಳ್ಳಿ, ಮಂಜುನಾಥ ಮಲಗೋಡ, ಸಂಕೇತ ಪಾಟೀಲ, ಪವನ ಕಜೂರಕರ, ರಘು ಮುತ್ತಳ್ಳಿ, ರವಿ ಅಂಗಡಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net