

ಹಾವೇರಿ: ಅಟಲ್ ಬಿಹಾರಿ ವಾಜಪೇಯಿ ಅವರು ವಿಶ್ವ ಕಂಡ ಮಹಾನ್ ಚೇತನ. ಕಾಂಗ್ರೆಸೇತರ ಮೊದಲ ಪ್ರಧಾನಿಯಾಗಿದ್ದ ಅಟಲ್‌ಜಿ ಅವರ ಅವಧಿಯಲ್ಲಿ ದೇಶದಲ್ಲಿ ರಾಜಕೀಯ ನೀತಿ ಬದಲಾಯಿತು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಹೇಳಿದರು.
ನಗರದ ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಭಾರತ ರತ್ನ ದಿ.ಅಟಲ್ ಬಿಹಾರಿ ವಾಜಪೇಯಿ ಅವರ 99ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಅಟಲ್‌ಜಿ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಅವರು ಮಾತನಾಡಿದರು.
ಸ್ವತಂತ್ರ ಪೂರ್ವದಲ್ಲಿ ಭಾರತೀಯ ವಿಚಾರಧಾರೆಗಳನ್ನು ಪ್ರಚುರಪಡಿಸಿ, ಸ್ವಾತಂತ್ರಾೃ ನಂತರ ಕಾಂಗ್ರೆಸ್ ಪಕ್ಷದ ನೀತಿಗಳನ್ನು ವಿರೋಧಿಸಿದರು. ಸ್ವದೇಶಿ ನೀತಿಗೆ ಅವರು ಪ್ರಾಧಾನ್ಯತೆ ನೀಡಿದರು. ಚಥುಷ್ಪಥ ರಸ್ತೆ ಹಾಗೂ ಸರ್ವಶಿಕ್ಷಣ ಅಭಿಯಾನದಂತಹ ಹಾಗೂ ಪೊಕ್ರಾನ್ ಅಣುಸ್ಫೋಟದ ಮೂಲಕ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಕ್ತಿಶಾಲಿ ಆಗಿಸಿದರು ಎಂದರು.
ಭಯೋತ್ಪಾದನೆ ತಡೆ ಕಾಯ್ದೆ ಜಾರಿಗೊಳಿಸುವ ಮೂಲಕ ಭಾರತಕ್ಕೆ ಹೊಸ ಆಯಾಮ ನೀಡಿದರು. ಅವರು ಪ್ರಸಿದ್ಧ ಕವಿ ಹಾಗೂ ಬರಹಗಾರರೂ ಆಗಿದ್ದರು. ಅಲ್ಲದೇ ಪಾಕಿಸ್ತಾನದೊಂದಿಗೆ ರಾಜತಂತ್ರಿಕ ಸಂಬಂಧ ಸುಧಾರಿಸಲು ಬಸ್ ಮೂಲಕ ಲಾಹೋರ್‌ಗೆ ಪ್ರಯಾಣ ಬೆಳಿಸಿದ್ದರು ಎಂದು ಸ್ಮರಿಸಿದರು. ಅಟಲ್‌ಜಿ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದ ದೀನದಯಾಳ ಉಪಾಧ್ಯಾಯ ಹಾಗೂ ಶ್ಯಾಮ ಪ್ರಸಾದ ಮುಖರ್ಜಿಯವರು ಜನಸಂಘ ಸ್ಥಾಪಿಸಲು ಪ್ರಭಾವ ಬೀರಿದ್ದರು ಎಂದು ಹೇಳಿದರು.
ಸಮಾರಂಭದಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸೌಭಾಗ್ಯಮ್ಮ ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಶಿಧರ ಹೊಸಳ್ಳಿ, ರುದ್ರೇಶ ಚಿನ್ನಣ್ಣನವರ, ಜಿಲ್ಲಾ ಕಾರ್ಯದರ್ಶಿ ಡಾ.ಸಂತೋಷ ಆಲದಕಟ್ಟಿ, ಲತಾ ಬಡ್ನಿಮಠ, ನೀಲಪ್ಪ ಚಾವಡಿ, ಲಲಿತಾ ಗುಂಡೇನಹಳ್ಳಿ, ಬಸವಣ್ಣೆವ್ವ ಕನವಳ್ಳಿ, ಪುಷ್ಪಾ ಚಕ್ರಸಾಲಿ, ಕಿರಣ ಕೋಣನವರ, ನಂಜುಂಡೇಶ ಕಳ್ಳೇರ, ಮಂಜುನಾಥ ತಾಂಡೂರ, ಅಡುವಯ್ಯ ಯಲುಗಿಮಠ, ಹನುಮಂತಗೌಡ ಗಾಜಿಗೌಡ್ರ, ಮಂಜುನಾಥ ಹುಲಗೂರ, ಹೊನ್ನಪ್ಪ ಮಾಳಗಿ, ಜಗದೀಶ ಕೊಂಡರಮ್ಮನವರ, ಚಿಕ್ಕಪ್ಪ ದೊಡ್ಡತಳವಾರ, ಮನೋಜ ಜಾಧವ, ಸೋಮು ಅಂಗೂರ, ಸುಜಿತ ಜೈನ್, ಗಿರೀಶ ಶೆಟ್ಟರ, ಬಸವರಾಜ ಗುಂಡೇನಹಳ್ಳಿ, ಕರಿಯಲ್ಲಪ್ಪ ಹರಿಜನ, ಇತರರು ಉಪಸ್ಥಿತರಿದ್ದರು.