ಭಾವಸಾರ ಉತ್ಸವ, ಪ್ರತಿಭಾ ಪುರಸ್ಕಾರಕ್ಕೆ ಚಾಲನೆ

17 HVR 7
Published on

ಹಾವೇರಿ: ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಗುರು ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಿಲ್ಲಾ ಭಾವಸಾರ ಉತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಶ್ರೀ ಕ್ಷೇತ್ರ ಪಂಡರಾಪುರದ ಪ್ರಭಾಕರ ಬುವಾ ಬೋಧಲೆ ಮಹಾರಾಜರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಭಾವಸಾರ ಕ್ಷತ್ರಿಯ ಸಮಾಜ ಸಣ್ಣ ಸಮಾಜವಾಗಿದ್ದರೂ ವಿದ್ಯಾರ್ಥಿಗಳು ಹೆಚ್ಚಿನ ವ್ಯಾಸಂಗ ಮಾಡಿ ಉಜ್ವಲ ಭವಿಷ್ಯವನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಸಂತೋಷದ ವಿಷಯ ಎಂದರು.
ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ ಮಾಳದಕರ ಮಾತನಾಡಿ, 100ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗಿದೆ. ಜಿಲ್ಲೆಯ ಸುಜಾತಾ ಕುಂಟೆ ಬಿಎಡ್ ಪದವಿಯಲ್ಲಿ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಪಡೆದಿದ್ದಾರೆ ಎಂದರು.
ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿದರು.
ಸಮಾರಂಭದಲ್ಲಿ ಎಐಬಿಕೆ ಮಹಾಸಭಾ ರಾಷ್ಟ್ರೀಯ ಸಲಹೆಗಾರ ಕೆ.ಜಿ.ಟೀಕರೆ, ಯಶವಂತ ಬುವಾ ಪ್ರಭಾಕರ, ಭಾನುದಾಸ ಸರ್ವದೆ, ವಸಂತರಾವ್ ಮಾಳದಕರ, ತಾಲೂಕು ಯುವರಾಜ ನವಲೆ, ಅರುಣ ಕುಂಟೆ, ಪ್ರಮೋದ ನವಲೆ, ಶ್ರೀಕಾಂತ ಮಾಳದಕರ, ಪಾಂಡುರಂಗ ಮಹೇಂದ್ರಕರ, ಗೀತಾಬಾಯಿ ಅಂಬೇಕರ, ಗಣೇಶ ಆಚಲಕರ, ಪರಶುರಾಮ ಮಾಳದಕರ, ಖಂಡೋಬಾ ರಾಶಿನಕರ, ಮಂಜುನಾಥ ವಂಟ್ಕರ್, ಪರಶುರಾಮ ಸುಲಖ, ಶೇಷಗಿರಿ ತಾಂದಾಳೆ, ಮಂಜುನಾಥ ವಂಟಕರ, ತುಕಾರಾಮ ಮಾಳದಕರ, ವಿಶ್ವನಾಥ ಬೊಂದಾಳೆ, ಅನಿಲ ನವಲೆ, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net