ಹಾವೇರಿ: ತಾಲೂಕಿನ ಭರಡಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶ್ರೀ ಭಗತ್‌ಸಿಂಗ್ ಸಮಗ್ರ ಸೇವಾ ಸಂಸ್ಥೆ ಹಾವೇರಿ ವತಿಯಿಂದ ಶ್ರೀ ದುರ್ಗಾದೇಔಇ ಮಹೋತ್ಸವದ ಅಂಗವಾಗಿ ಇತ್ತೀಚೆಗೆ ಶ್ರೀ ಹರಿಕೃಷ್ಣ ಕಲಾ ತಂಡದಿಂದ ‘ಮಣ್ಣಿನ ಮಗ ಮಣ್ಣಿಗೆ ಹೋದ’ ನಾಟಕ ಪ್ರದರ್ಶನಗೊಂಡಿತು.
ರೇವಣಸಿದ್ದೇಶ ಪೂಜಾರ ರಚಿಸಿ ನಿರ್ದೇಶಿರುವ ನಾಟಕದಲ್ಲಿ ಎಸ್.ಎಚ್.ಪೂಜಾರ ಹಾಗೂ ಸಹ ಕಲಾವಿದರು ನಾಟಕದಲ್ಲಿ ನಟಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಶಿವಮೂರ್ತೆಪ್ಪ ಮೈದೂರ, ಸಿ.ವಿ.ಹಿರೇಮಠ, ಹನುಮಂತಪ್ಪ ಹೊಂಚಣ್ಣನವರ, ಜಗದೀಶ ಬೆಟಗೇರಿ, ಬೀರಪ್ಪ ಕೋಟಿಹಾಳ, ಗುಡ್ಡಪ್ಪ ಕೋಟಿಹಾಳ, ಇತರರಿದ್ದರು.