ಅನಾಥರಿಗೆ ಭಗತ್‌ಸಿಂಗ್ ಕಾಲೇಜ್‌ನಲ್ಲಿ ಉಚಿತ ಶಿಕ್ಷಣ

Bhagat Singh College 3
Published on

ಹಾವೇರಿ: ಭಗತ್‌ಸಿಂಗ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಸತೀಶ ಎಂ.ಬಿ. ಅವರ ಜನ್ಮದಿನದ ಅಂಗವಾಗಿ ಸಂಸ್ಥೆಯ ಕಾಲೇಜ್‌ಗಳಲ್ಲಿ ತಂದೆ, ತಾಯಿ ಇಲ್ಲದ ಅನಾಥ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುವುದು.

ಹಾವೇರಿ ನಗರ ಹಾಗೂ ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನ ಕಾಲೇಜ್‌ಗಳಲ್ಲಿ 20 ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿಯೊಂದಿಗೆ ಪ್ರಥಮ ಪಿ.ಯು ವಿಜ್ಞಾನ ವಿಭಾಗಕ್ಕೆ ರಿಯಾಯ್ತಿ ದರದಲ್ಲಿ ಪ್ರವೇಶಾತಿ ನೀಡಲಾಗುವುದು. ಉಚಿತ ಟ್ಯಾಬ್, ಸಿ.ಇ.ಟಿ, ನೀಟ್ ಮತ್ತು ಜೆ.ಇ.ಇ ತರಗತಿ ಸೇರಿ ಅನೇಕ ಸೌಲಭ್ಯಗಳನ್ನು ಒದಗಿಸಲಾಗುವುದು. ಆಸಕ್ತರು ಮೇ 15ರೊಳಗಾಗಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಕಾಲೇಜ್ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net