

ಹಾವೇರಿ: ಪ್ರಸಕ್ತ 2025-26ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ತಲಾ ಏಳು ಶಿಕ್ಷಕರು ಸೇರಿ ಒಟ್ಟು 21 ಶಿಕ್ಷಕರು ಆಯ್ಕೆಯಾಗಿದ್ದಾರೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ಹಿರೇಕೆರೂರ ತಾಲೂಕು ಕಾಲುವೆಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕ ಚಂದ್ರಪ್ಪ ಮಳ್ಳಣ್ಣನವರ, ಸವಣೂರ ತಾಲೂಕು ಬಸನಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕ ಇಮಾಮಸಾಬ ಜಾಫರನವರ, ಶಿಗ್ಗಾಂವ ತಾಲೂಕು ಶಿವಪೂರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕ ತಿರಕನಗೌಡ ಪಾಟೀಲ, ಹಾನಗಲ್ಲ ತಾಲೂಕು ಕಲ್ಲಹಕ್ಕಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕ ಸುರೇಶ ಮಾನೆ, ಹಾವೇರಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.5ರ ಸಹಶಿಕ್ಷಕಿ ಡಿ.ಟಿ.ಹೆಬ್ಬಳ್ಳಿ, ಬ್ಯಾಡಗಿ ತಾಲೂಕು ಮೊಟೆಬೆನ್ನೂರ ಸಿದ್ದಮ್ಮ ಮೈಲಾರ ಹಿ.ಪ್ರಾ.ಶಾಲೆ ಸಹಶಿಕ್ಷಕ ಬಸವರಾಜ ಗೋಣಗೇರಿ ಹಾಗೂ ರಾಣೆಬೆನ್ನೂರ ಶಾಸಕರ ಮಾದರಿ ಶಾಲೆ ಸಹಶಿಕ್ಷಕಿ ಎನ್.ಕೆ.ಮಾನೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗ: ರಟ್ಟಿಹಳ್ಳಿ ತಾಲೂಕು ಕುಂಚೂರ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕ ಉಜ್ಜನಗೌಡ ಮರದ, ಸವಣೂರ ಪಿ.ಎಂ.ಶ್ರೀ ಸರ್ಕಾರಿ (ಉರ್ದು) ಆರ್.ಎಂ.ಎಸ್.ಎ.ಶಾಲೆ ಸಹಶಿಕ್ಷಕಿ ಸಕೀನಾಬಿ, ಶಿಗ್ಗಾಂವಿ ತಾಲೂಕು ಹನುಮರಹಳ್ಳಿ ಸ.ಹಿ.ಪ್ರಾ. ಶಾಲೆ ಸಹಶಿಕ್ಷಕ ಸಂಜೀವ ಪೂಜಾರ, ಹಾನಗಲ್ಲ ತಾಲೂಕು ಕೊಪ್ಪರಸಿಕೊಪ್ಪ ಸ.ಹಿ.ಪ್ರಾ. ಶಾಲೆ ಸಹಶಿಕ್ಷಕ ಸತೀಶ ಸಾವಳಗಿ, ಹಾವೇರಿ ತಾಲೂಕು ದೇವಿಹೊಸೂರ ಸ.ಹಿ.ಉ.ಪ್ರಾ. ಶಾಲೆ ಸಹಶಿಕ್ಷಕ ಇಸ್ಮಾಯಿಲ್ ಖಾನ್, ಬ್ಯಾಡಗಿ ತಾಲೂಕು ಚಿನ್ನಿಕಟ್ಟಿ ಸ.ಹಿ.ಪ್ರಾ. ಶಾಲೆ ಸಹಶಿಕ್ಷಕಿ ಶ್ರೀದೇವಿ ಮಾಳಪ್ಪನವರ ಹಾಗೂ ರಾಣೆಬೆನ್ನೂರ ತಾಲೂಕು ಅಂತರವಳ್ಳಿ ಸ.ಹಿ.ಪ್ರಾ. ಶಾಲೆ ಸಹಶಿಕ್ಷಕ ರವಿ ಅಂತರವಳ್ಳಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರೌಢ ಶಾಲಾ ವಿಭಾಗ: ರಾಣೆಬೆನ್ನೂರ ತಾ.ಹುಲಿಕಟ್ಟಿ ಸರ್ಕಾರಿ ಪ್ರೌಢಶಾಲೆ ದೈಹಿಕ ಶಿಕ್ಷಕ ಶಶಿಧರ ಅಡಿವೆಪ್ಪನವರ, ಸವಣೂರ ತಾ. ಚಳ್ಯಾಳ ಸರ್ಕಾರಿ ಪ್ರೌಢಶಾಲೆ(ಆರ್.ಎಣ.ಎಸ್.ಎ.) ಸಹ ಶಿಕ್ಷಕ ಯಲ್ಲಪ್ಪ ಮಳಲಿ, ಶಿಗ್ಗಾಂವಿಯ ಬನ್ನೂರ ಸರ್ಕಾರಿ ಪ್ರೌಢಶಾಲೆ ನಿಂಗಪ್ಪ ಕಾಟೇನಹಳ್ಳಿ, ಹಾನಗಲ್ಲ ಆಡೂರ ಕೆಪಿಎಸ್ ಸಹಶಿಕ್ಷಕಿ ನಿರ್ಮಲಾ ಮುದಿಗೌಡ್ರ, ಹಾವೇರಿ ತಾಲೂಕು ಹಳೇರಿತ್ತಿ ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕ ವಸಂತ ಮೆಳ್ಳಳ್ಳಿ, ಬ್ಯಾಡಗಿ ತಾಲೂಕು ಬಿಸಲಹಳ್ಳಿ ಸರ್ಕಾರಿ ಪ್ರೌಢಾಶಾಲೆ ಸಹಶಿಕ್ಷಕ ಶಂಕ್ರಪ್ಪ ಲಮಾಣಿ ಹಾಗೂ ರಟ್ಟಿಹಳ್ಳಿ ತಾಲೂಕು ನೇಸ್ವಿ ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕ ಸುರೇಶ ಕಣಗೋಟಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ತಿಳಿಸಿದೆ.