

ಹಾವೇರಿ: ತಾಲೂಕಿನ ಬೆಳವಗಿ ಗ್ರಾಮದ ಬಳಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಸಾರಿಗೆ ಬಸ್ ಡಿಕ್ಕಿಪಡಿಸಿದ್ದರಿಂದ ಟಿಸಿ ಹಾಗೂ ಬಸ್ ಜಖಂಗೊಂಡಿದೆ. ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ. ಶಿರಹಟ್ಟಿ ಡಿಪೋ ಬಸ್ ರಾಣೆಬೆನ್ನೂರ ಶಿರಹಟ್ಟಿ ಮಾರ್ಗವಾಗಿ ಗದಗ ಕಡೆಗೆ ಹೊರಟಿತ್ತು. ಈ ವೇಳೆ ರಸ್ತೆಬದಿ ಪೆಟ್ರೋಲ್ ಬಂಕ್ ಬಳಿ ಅಳವಡಿಸಿದ್ದ ಟಿಸಿಗೆ ಬಸ್ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಈ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡ ಪರಿಣಾಮ, ಚಾಲಕರಿಗೆ, ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ. ಇದರಿಂದ ಭಾರಿ ದುರಂತ ತಪ್ಪಿದೆ. ಗುತ್ತಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಕುರಿತು ಪ್ರಕರಣ ದಾಖಲಾಗಿಲ್ಲ ಎಂದು ಗುತ್ತಲ ಠಾಣೆ ಪೊಲೀಸರು ತಿಳಿಸಿದ್ದಾರೆ.