ಪ್ರೀತಿಸಿ ಮದ್ವೆಯಾದ 5 ತಿಂಗಳಿಗೆ ಮೂರು ತಿಂಗಳ ಗರ್ಭಿಣಿ ದುರಂತ ಸಾವು: ಪ್ರೇಮ ವಿವಾಹವೇ ಮುಳುವಾಯ್ತಾ?

DVG Girl
Published on

ದಾವಣಗೆರೆ: ಮೂರು ತಿಂಗಳ ಗರ್ಭಿಣಿ ನೇಣಿಗೆ ಶರಣಾಗಿರುವ ಘಟನೆ ನಗರದ ಹೊರವಲಯದ ಬಾಡಾ ಕ್ರಾಸ್ ಸಮೀಪವಿರುವ ಆಂಜನೇಯ ಕಾಟನ್ ಮೀಲ್ ಬಳಿಯ ಮನೆಯಲ್ಲಿ ನಡೆದಿದೆ.

ರೇಣುಕಾ (24) ಆತ್ಮಹತ್ಯೆಗೆ ಶರಣಾದ ಗರ್ಭಿಣಿ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಲ್ಲೇದೇವರು ಗ್ರಾಮ ನಿವಾಸಿಯಾದ ರೇಣುಕಾ ಪ್ರಕಾಶ್ ಎಂಬಾತನನ್ನು ಪ್ರೀತಿಸಿ 5 ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು.

ಪತಿಯ ಮನೆಯವರ ನಿರಂತರ ಕಿರುಕುಳ ತಾಳಲಾರದೇ ರೇಣುಕಾ ಆತ್ಮಹತ್ಯೆ ಹಾದಿ ಹಿಡಿದಿದ್ದಾಳೆಂದು ಹೇಳಲಾಗಿದೆ. ಇತ್ತ ಮೃತಳ ಪಾಲಕರು ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದಾರೆ.

ಸದ್ಯ ಆರೋಪಿ ಪ್ರಕಾಶನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)‌

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net