ಸಮಾಜ ಕಟ್ಟುವ ಕೆಲಸ ಶಿಕ್ಷಕರದ್ದು; ಬಸವೇಶ್ವರ ನಗರ ಮಹಿಳಾ ನಾಗರಿಕರ ವೇದಿಕೆ ಸಮಾರಂಭದಲ್ಲಿ ರೇವಿರೆಂಡ್ ಲೂಮಿನಾ ಸಿಸ್ಟರ್ ಹೇಳಿಕೆ

16 HVR 9 B
Published on

ಹಾವೇರಿ: ಶಿಕ್ಷಕರನ್ನು ಸನ್ಮಾನಿಸಿದರೆ, ಇಡೀ ಸಮಾಜವನ್ನು ಗೌರವಿಸಿದಂತೆ. ಭಾವಿ ಸಮಾಜದ ಜವಾಬ್ದಾರಿಯುತ ಪ್ರಜೆಗಳನ್ನು ಕಟ್ಟುವ ಕೆಲಸ ಶಿಕ್ಷಕರದ್ದಾಗಿರುತ್ತದೆ. ಒಳ್ಳೆಯ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸಿದಾಗ ಅವರು ಮತ್ತಷ್ಟು ವಿದ್ಯಾರ್ಥಿಗಳ ಚಟುವಟಿಕೆಗಳಿಗೆ ಪ್ರೋತ್ಸಾಹಿಸುತ್ತಾರೆ ಎಂದು ಮುಖ್ಯೋಪಾಧ್ಯಾಯಿನಿ ರೇವಿರೆಂಡ್ ಲೂಮಿನಾ ಸಿಸ್ಟರ್ ಹೇಳಿದರು.

ಇಲ್ಲಿನ ಬಸವೇಶ್ವರನಗರದಲ್ಲಿ ಮಂಗಳವಾರ ಬಸವೇಶ್ವರನಗರ ಮಹಿಳಾ ನಾಗರಿಕ ವೇದಿಕೆ ಮತ್ತು ಮಕರಂದ ಸ್ವರಸಂಗೀತ ಕಲಾ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಸ್ಥಳೀಯ 18 ಮುಖ್ಯಶಿಕ್ಷಕಿಯರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೇದಿಕೆ ಮಾಜಿ ಅಧ್ಯಕ್ಷೆ ರಾಜೇಶ್ವರಿ ಬಿಷ್ಟನಗೌಡ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕರು ದೇಶದ ಭದ್ರ ಬುನಾದಿ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಹಾಗಾಗಿ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರನ್ನು ಗುರುತಿಸಿ ಪ್ರೋತ್ಸಾಹಿಸಲಾಗಿದೆ ಎಂದರು.

ಶಿಕ್ಷಕಿ ಡಾ.ಗೀತಾ ಸುತ್ತಕೋಟಿ ಮಾತನಾಡಿದರು.

ಸಮಾರಂಭದಲ್ಲಿ ಬಸವೇಶ್ವರ ನಗರದ ಮಹಿಳಾ ನಾಗರಿಕ ವೇದಿಕೆಯ ಅಧ್ಯಕ್ಷೆ ಲೀಲಾವತಿ ಪಾಟೀಲ, ಕಾರ್ಯದರ್ಶಿ ಶಶಿಕಲಾ ಮಠದ, ಕೋಶಾಧ್ಯಕ್ಷೆ ಜಯಶ್ರೀ ಪಾಟೀಲ, ಮಮತಾ ಹಿಂಚಿಗೇರಿ, ರೇಣುಕಾ ನರಗುಂದ, ಅನುಪಮಾ ಹಿರೇಮಠ, ಪಲ್ಲವಿ ಗುಡಗೂರ, ಲತಾ ಹಳಕೊಪ್ಪ, ಚಂಪಾವತಿ ಹುಣಸಿಕಟ್ಟಿ, ಸರೋಜಿನಿ ಬೆನ್ನೂರ, ಇತರರು ಉಪಸ್ಥಿತರಿದ್ದರು.

ದೀಪಾ ನೆಲೋಗಲ್ ಮತ್ತು ಲತಾ ಹಳಕೊಪ್ಪ ಪ್ರಾರ್ಥಿಸಿದರು. ಸರೋಜಿನಿ ಬೆನ್ನೂರ ಸ್ವಾಗತಿಸಿದರು. ಮಧುಮತಿ ಚಿಕ್ಕೇಗೌಡರ ನಿರೂಪಿಸದರು. ಲತಾ ಹಳಕೊಪ್ಪ ವಂದಿಸಿದರು.

18 ಶಿಕ್ಷಕರಿಗೆ ಸನ್ಮಾನ

ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರಾದ ಶೋಭಾ ಜಾಗಟಗೇರಿ, ಉಮಾ ಎ ಹೊರಡಿ, ಮಂಜುಳಾ ಕಳ್ಳಿಹಾಳ, ದೇವಕ್ಕ ಹೆಬ್ಬಳ್ಳಿ, ಲೂಮಿನಾ ಸಿಸ್ಟರ್, ಸ್ವಪ್ನಾ ಆರ್.ಲೋಬೊ, ಡಾ.ಗೀತಾ ಸುತ್ತಕೋಟಿ, ವೈಶಾಲಿ ಕೋರಿಶೆಟ್ಟರ, ಯಶೋಧಾ ಚಿಕ್ಕಮಠ, ಧನ್ಯಾ ಮಾಗಾವಿ, ಮಮತಾ ನಂದೀಹಳ್ಳಿ, ಸುಪ್ರಿಯಾ ಕೆ.ಟಿ, ಸುನೀತಾ ಎಸ್.ಕೆ, ಶಾಂತಾ ಹಾವೇರಿ, ಇತರರನ್ನು ಸನ್ಮಾನಿಸಲಾಯಿತು. ಹಾಗೂ ರಾಜ್ಯ ಅಲ್ಪಸಂಖ್ಯಾತ ಆಯೋಗದ ಸದಸ್ಯೆ ಪರಿಮಳಾ ಜೈನ್ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net