ಬಸವೇಶ್ವರ ನಗರದಲ್ಲಿ ಬಿರುಕು ಬಿಟ್ಟ ರಸ್ತೆ

4 HVR 6
Published on

ಹಾವೇರಿ: ಇಲ್ಲಿನ ಬಸವೇಶ್ವರ ನಗರದ ಎ ಬ್ಲಾಕ್ 18ನೇ ಕ್ರಾಸ್‌ನಲ್ಲಿ ರಸ್ತೆ ಮಧ್ಯದಲ್ಲೇ ದೊಡ್ಡ ಗುಂಡಿ ಬಿದ್ದಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ.

ಒಳಚರಂಡಿ ಕಾಮಗಾರಿಗಾಗಿ ಅಳವಡಿಸಿದ್ದ ಚೇಂಬರ್ ಒಡೆದು ದೊಡ್ಡ ಗುಂಡಿ ಬಾಯ್ತೆರೆದಿದೆ. ಇದರಿಂದಾಗಿ ರಸ್ತೆಯಲ್ಲಿ ಓಡಾಡುವ ವಾಹನ ಸವಾರರು ಪರದಾಡುವಂತಾಗಿದೆ. ಪದಾಚಾರಿಗಳು, ಮಕ್ಕಳು ಭಯದಲ್ಲೇ ಓಡಾಡಬೇಕಾಗಿದೆ.

ತಿಂಗಳ ಹಿಂದೆಯೇ ಗುಂಡಿ ಬಿದ್ದಿದ್ದು, ಈ ಕುರಿತು ನಗರಸಭೆಗೆ ಮಾಹಿತಿ ನೀಡಲಾಗಿದೆ. ನಗರಸಭೆಯವರು, ಗುಂಡಿ ಪಕ್ಕದಲ್ಲಿ ಬ್ಯಾರಿಕೇಡ್ ಇಟ್ಟು ಸುಮ್ಮನಾಗಿದ್ದಾರೆ. ಈ ಕೂಡಲೇ ದುರಸ್ಥಿ ಮಾಡಬೇಕು. ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯ ನಿವಾಸಿಗಳು ‘ವಿಜಯವಾಣಿ’ ಪತ್ರಿಕೆ ಮೂಲಕ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net