ಕಾರಲ್ಲಿ ಬಂದು ಮನೆ ಕಳ್ಳತನಕ್ಕೆ ಯತ್ನ; ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ಹೈಟೆಕ್ ಕಳ್ಳರು

27 HVR 8
Published on

ಹಾವೇರಿ: ಸ್ಕೋಡಾ ಕಾರಿನಲ್ಲಿ ಬಂದ ನಾಲ್ವರು ಕಳ್ಳರ ತಂಡ ಹಾಡಹಗಲೇ ಮನೆ ಕಳ್ಳತನಕ್ಕೆ ಯತ್ನಿಸಿದ ಘಟನೆ ಇಲ್ಲಿನ ಬಸವೇಶ್ವರ ನಗರ ಸಿ ಬ್ಲಾಕ್ 9ನೇ ಕ್ರಾಸ್‌ನಲ್ಲಿ ಸೋಮವಾರ ನಡೆದಿದೆ.
ಡಾ.ಭಗವತಿ ಎಂಬುವರ ಮನೆ ಕಳ್ಳತನಕ್ಕೆ ಯತ್ನಿಸಿದ್ದಾರೆ. ಮನೆಗೆ ಬೀಗ ಹಾಕಿಕೊಂಡು ಆಸ್ಪತ್ರೆಗೆ ತೆರಳಿದ್ದರು. ಇದನ್ನು ಗಮನಿಸಿದ್ದ ನಾಲ್ವರು ಕಳ್ಳರ ತಂಡ ಬಿಳಿ ಬಣ್ಣದ ಹೈಟೆಕ್ ಸ್ಕೋಡಾ ಕಾರಿನಲ್ಲಿ ಬಂದಿದ್ದರು. ಕಾರು ರಿವರ್ಸ್ ತೆಗೆದುಕೊಂಡು ಈ ಮನೆಯ ಹಿಂಭಾಗಕ್ಕೆ ತೆರಳಿ ಕಳ್ಳತನಕ್ಕೆ ಯತ್ನಿಸಿದ್ದರು. ಅಷ್ಟರಲ್ಲಿ ಡಾಕ್ಟರ್ ಮನೆಗೆ ವಾಪಸ್ ಬಂದಿದ್ದಾರೆ. ಇದನ್ನು ಗಮನಿಸಿದ ಕಳ್ಳರು ಹಿಂದಿನ ಕಾಂಪೌಂಡ್ ಜಿಗಿದು ಕಾರು ಹತ್ತಿಕೊಂಡು ಪರಾರಿಯಾಗಿದ್ದಾರೆ.
ಬಾಗಿಲು ಮುರಿಯಲು ಕಬ್ಬಿಣದ ರಾಡು, ಚಾಕು ಹಿಡಿದುಕೊಂಡಿದ್ದ ಕಳ್ಳರ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಸ್ಥಳಕ್ಕೆ ಹಾವೇರಿ ಶಹರ ಠಾಣೆ ಇನ್‌ಸ್ಪೆಕ್ಟರ್ ಮೋತಿಲಾಲ ಪವಾರ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿದೆ. ಕಳ್ಳರ ಪತ್ತೆಗೆ ಬಲೆ ಬೀಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net