

ಹಾವೇರಿ: ಇಲ್ಲಿನ ಕಲ್ಲುಮಂಟಪ ರಸ್ತೆಯ ಶ್ರೀ ದೊಡ್ಡ ಬಸವೇಶ್ವರ ಹಾಗೂ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಸೋಮವಾರ ಕಾರ್ತಿಕೋತ್ಸವದ ಅಂಗವಾಗಿ ಸರ್ವಧರ್ಮ ಸಾಮೂಹಿಕ ವಿವಾಹ ಜರುಗಿತು.
ಐದು ಜೋಡಿ ವಧು- ವರರು ಹಾಗೂ ಕುಟುಂಬದವರು, ಸಂಬಂಧಿಕರು, ಭಕ್ತರು ಸಮಾರಂಭದಲ್ಲಿ ಪಾಲ್ಗೊಂಡು ನೂತನ ಜೋಡಿಗಳಿಗೆ ಹರಸಿದರು. ಕಾರ್ತಿಕೋತ್ಸವದ ಅಂಗವಾಗಿ ಬಸವಣ್ಣ ದೇವರಿಗೆ ವಿಶೇಷ ಪೂಜೆ, ರುದ್ರಾಭಿಷೇಕ ಹಾಗೂ ನವನೀತ ಅಲಂಕಾರ ಮಾಡಲಾಗಿತ್ತು.
ಮಧ್ಯಾಹ್ನ ಭಕ್ತರು ಅನ್ನಪ್ರಸಾದ ಸೇವಿಸಿ ಕೃತಾರ್ತರಾದರು. ಸಂಜೆ ಬಸವಣ್ಣ ದೇವರ ಕಾರ್ತಿಕೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಪುನೀತರಾದರು.