

ಹಾವೇರಿ: ವಿಶ್ವಗುರು ಬಸವಣ್ಣ ಅವರನ್ನು ಕರ್ನಾಟಕದ ಸಾಂಂಸ್ಕೃತಿಕ ನಾಯಕ ಎಂದು ಘೋಷಿಸಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಗರದ ರಜನಿ ಕನ್ವೆನ್ಷನ್ ಹಾಲ್‌ನಲ್ಲಿ ಸೆ.14ರಂದು ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬಸವಾದಿ ಶಿವಶರಣರ ಆಚಾರ, ವಿಚಾರ, ಅವರ ವಚನ ಸಾಹಿತ್ಯವನ್ನು ಜನ ಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ನಾಡಿನ ಲಿಂಗಾಯತ ಮಠಾಧೀಶರ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವಪರ ಸಂಘಟನೆಗಳ ಸಹಯೋಗದಲ್ಲಿ ರಾಜ್ಯಾದ್ಯಂತ ಸೆ.1ರಿಂದ ಅ.1ರವರೆಗೆ ಅಭಿಯಾನ ನಡೆಯಲಿದೆ. ಅಭಿಯಾನದ ಅಂಗವಾಗಿ ಜಿಲ್ಲೆಯಲ್ಲಿ ಸೆ.14ರಂದು ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ಪ್ರಮುಖ ಮಠಾಧೀಶರು, ಜನಪತ್ರಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಹಾವೇರಿ ನಗರದ ಹುಕ್ಕೇರಿ ಮಠದಲ್ಲಿ ಶನಿವಾರ ರಜನಿ ಕನ್ವೆಕ್ಷನ್‌ನಲ್ಲಿ ಸೆ.14ರಂದು ಆಯೋಜಿಸಿರುವ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮದ ಕುರಿತ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಯಿತು. ಪ್ರಮುಖರಾದ ಮಹೇಶ ಚಿನ್ನಿಕಟ್ಟಿ, ಅಶೋಕ ಮಾಗನೂರ, ತಮ್ಮಣ್ಣ ಮುದ್ದಿ, ರಾಜಣ್ಣ ಮಾಗನೂರ, ಶಿವಣ್ಣ ಶಿರೂರ, ವೀರಣ್ಣ ಅಂಗಡಿ, ಶಿವಯೋಗಿ ಮಾಮಲೆಪಟ್ಟಣಶೆಟ್ಟಿ, ಶಿವಬಸಪ್ಪ ಮುದ್ದಿ, ಬಸವರಾಜ ಮುಳಗುಂದ, ಉಳಿವೆಪ್ಪ ಪಂಪಣ್ಣವರ, ಶಿವಯೋಗಿ ಬೆನ್ನೂರು, ಮಲ್ಲಿಕಾರ್ಜುನ ಹಿಂಚಿಗೇರಿ, ಮಹಾರಾಜಪೇಟ, ಮಾಲತೇಶ ಕರೆಮಣ್ಣನವರ, ಚಂಪಾ ಹುಣಸಿಕಟ್ಟಿ, ಕಮಲಮ್ಮ ಬುಕ್ಕಶೆಟ್ಟಿ, ಇತರರಿದ್ದರು.