ಮನೆಯಲ್ಲಿ ಮಹಾಮನೆ ಸಮಾರೋಪ ಇಂದು

Published on

ಹಾವೇರಿ: ಬಸವ ಬಳಗದಿಂದ ಶ್ರಾವಣ ಮಾಸದ ಅಂಗವಾಗಿ ನಗರದಲ್ಲಿ ಒಂದು ತಿಂಗಳ ಕಾಲ ಹಮ್ಮಿಕೊಂಡಿದ್ದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಆ.24ರಂದು ಬೆಳಗ್ಗೆ 10.30ಕ್ಕೆ ಶಿವಬಸವ ನಗರದ ಸಿಂದಗಿ ಮಠದಲ್ಲಿ ನಡೆಯಲಿದೆ.

ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬಳಗದ ಅಧ್ಯಕ್ಷ ವಿ.ಜಿ.ಯಳಗೇರಿ ಅಧ್ಯಕ್ಷತೆ ವಹಿಸುವರು. ಪ್ರೊ.ಸಿದ್ದಣ್ಣ ಲಂಗೋಟಿ ಉಪನ್ಯಾಸ ನೀಡುವರು. ಬಳಗದ ನಿಕಟ ಪೂರ್ವ ಅಧ್ಯಕ್ಷ ಚನ್ನಬಸವಣ್ಣ ರೊಡ್ಡನವರಗೆ ಸನ್ಮಾನಿಸಲಾಗುವುದು. ಶೋಭಾತಾಯಿ ಮಾಗಾವಿ, ಡಾ.ಕಲ್ಯಾಣಮ್ಮ ಲಂಗೋಟಿ, ಇತರರು ಭಾಗವಹಿಸುವರು. ಕಾವ್ಯಾ ಅಂಗಡಿ ವಚನ ಸಂಗೀತ ಗಾಯನ ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net