

ಹಾವೇರಿ: ತಾಲೂಕಿನ ಬಸಾಪುರ ಗ್ರಾಮದ ಸರ್ಕಾರ ಪ್ರೌಢಶಾಲೆ ಗ್ರಾಮದಿಂದ ಎರಡು ಕಿ.ಮೀ. ದೂರ ಇದ್ದು, ಶಾಲೆಗೆ ಹೋಗಲು ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ತಾಲೂಕು ಸಮಿತಿ ವತಿಯಿಂದ ವಾಕರಸಾ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ ಅವರಿಗೆ ಹಾವೇರಿಯಲ್ಲಿ ಶನಿವಾರ ಮನವಿ ಪತ್ರ ಸಲ್ಲಿಸಲಾಯಿತು. ತಾಲೂಕು ಅಧ್ಯಕ್ಷ ಆನಂದ ಮುರಡಪ್ಪನವರ, ಪ್ರಕಾಶ ಗೋಣೆಮ್ಮನವರ, ನಾಗರಾಜ ಶಿಡ್ಲಣ್ಣನವರ, ಮಹದೇವಪ್ಪ ಅಳಲಗೇರಿ, ಫಕ್ಕೀರೇಶ ದೊಡ್ಡಗುಡ್ಡಜನವರ, ಕೃಷ್ಣಾ ಚಾವಡಿ, ರವಿ ಚಾವಡಿ, ಪರಶುರಾಮ ಹುಲಿಮನಿ, ಪರಶುರಾಮ ಹಳ್ಳೂರ, ಮಂಜುನಾಥ ಕನ್ನವಳ್ಳಿ, ಮಲ್ಲೇಶ ಕೆಸರಳ್ಳಿ, ರಮೇಶ ಅಳಲಗಿರಿ, ಇತರರಿದ್ದರು.