

ಹಾವೇರಿ: ತಾಲೂಕಿನ ಬಸಾಪುರ ಗ್ರಾಮಕ್ಕೆ ಕೊಪ್ಪಳದ ಸಂಸ್ಥಾನ ಶ್ರೀ ಗವಿಮಠದ ಜಗದ್ಗುರು ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಫೆ.2ರಂದು ಬೆಳಗ್ಗೆ 10.30ಕ್ಕೆ ಆಗಮಿಸಲಿದ್ದಾರೆ.
ಗ್ರಾಮದ ಶ್ರೀ ಆಲದಮ್ಮ ದೇವಿ ಹಾಗೂ ಶ್ರೀ ದುರ್ಗಾದೇವಿಯ ನೂತನ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಧರ್ಮಸಭೆ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನೆ ನೀಡಲಿದ್ದಾರೆ.
ಅಗಡಿಯ ಅಕ್ಕಿಮಠದ ಶ್ರೀ ಗುರುಲಿಂಗ ಸ್ವಾಮೀಜಿ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಮತ್ತಿತರ ಗಣ್ಯರು, ಭಕ್ತರು ಭಾಗವಹಿಸಲಿದ್ದಾರೆ ಎಂದು ಶ್ರೀ ಆಲದಮ್ಮದೇವಿ ಭಕ್ತ ಸಮೂಹ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.