ಬಸಾಪುರ ಗ್ರಾಮದಲ್ಲಿ ಬಸವ ಪಂಚಮಿ

30 HVR 5
Published on

ಹಾವೇರಿ: ತಾಲೂಕಿನ ಬಸಾಪುರ ಗ್ರಾಮದಲ್ಲಿ ಮಾನವ ಬಂಧುತ್ವ ಮಹಿಳಾ ವೇದಿಕೆ ಜಿಲ್ಲಾ ಘಟಕದಿಂದ ಮಂಗಳವಾರ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಬಸವ ಪಂಚಮಿ ಆಚರಿಸಲಾಯಿತು.

ಹಾವು ಒಂದು ಮಾಂಸಹಾರಿ, ಸಸ್ಯಹಾರಿ ಅಲ್ಲ. ಹಾಗಾಗಿ, ನಾಗರ ಕಲ್ಲಿಗೆ ಹಾಲು ಎರೆಯುವ ಬದಲು ಬಡ ಮಕ್ಕಳಿಗೆ ವಿತರಣೆ ಮಾಡುವುದು ಸೂಕ್ತ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ನೀಲಪ್ಪ ಕಂಬಳಿ ಹೇಳಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಚಿಕ್ಕಪ್ಪ ಕನವಳ್ಳಿ, ಸಣ್ಣಪ್ಪ ಮೇಲ್ಮುರಿ, ನಾಗಪ್ಪ ಬಂಡಿವಡ್ಡರ, ಯಲ್ಲಪ್ಪ ಹರಿಜನ, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕಿ ಸುಮಂಗಲಾ ಇಪ್ಪಿಕೊಪ್ಪ, ಗ್ರಾಪಂ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net