

ಹಾವೇರಿ: ಜಿಲ್ಲೆಯ ಬಂಕಾಪುರ, ಬ್ಯಾಡಗಿ, ಹಾವೇರಿ ಶಹರ ಸೇರಿದಂತೆ ಸುತ್ತಮುತ್ತಲಿನ ಕೆಲವೆಡೆ ಶನಿವಾರ ಮಳೆ ಸಾಧಾರಣ ಮಳೆ ಸುರಿಯಿತು. ಕಾದು ಕೆಂಡದಂತಾಗಿದ್ದ ಭೂಮಿಗೆ ಮಳೆಯ ಸಿಂಚನ ತುಸು ತಂಪೆರೆದಿದೆ.
ಬೆಳಗಾವಿ, ಹುಬ್ಬಳ್ಳಿ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದಂತೆ ಬಂಕಾಪುರದತ್ತ ಮಳೆ ಗಾಳಿ ಶುರುವಾಯಿತು. ನಂತರ ಹಾವೇರಿ, ಬ್ಯಾಡಗಿಯತ್ತ ಗಾಳಿ, ಗುಡುಗು ಮಿಂಚು ಸಹಿತ ಮಳೆ ಆರಂಭವಾಯಿತು. ಆದರೆ, ಅಲ್ಪ ಪ್ರಮಾಣದ ಮಳೆ ಸುರಿಯಿತು. ಯಾವುದೇ ಹಾನಿಯಾದ ವರದಿಯಾಗಿಲ್ಲ.