

ಹಾವೇರಿ: ಲೋಕಕಲ್ಯಾಣಕ್ಕಾಗಿ ಗುಹೆಯಲ್ಲಿ ಸಿದ್ಧಿ ಸಮಾಧಿ ಅನುಷ್ಠಾನಕ್ಕೆ ಕುಳಿತ್ತಿದ್ದ ಸವಣೂರು ತಾಲೂಕಿನ ಕೃಷ್ಣಾಪುರದ ಶ್ರೀ ಮಠದ ಸ್ವಾಮೀಜಿ ನಿರಾಹಾರ ಮೌನ ಅನುಷ್ಠಾನದ ನಂತರ ಗುಹೆಯಿಂದ ಹೊರ ಬಂದಿದ್ದಾರೆ.
ಕೃಷ್ಣಾಪುರ ತಾಂಡಾದಲ್ಲಿರೋ ಬಂಜಾರಾ ಗುರು ಪೀಠದ ಕುಮಾರ ಮಹಾರಾಜ ಸ್ವಾಮೀಜಿ ತಮ್ಮದೇ ಮಠದ ಗುಹೆಯಲ್ಲಿ 62 ದಿನಗಳಿಂದ(ಎರಡು ತಿಂಗಳು) ಅನುಷ್ಠಾನಕ್ಕೆ ಕುಳಿತಿದ್ದರು.
ಗಾಳಿ ಹಾಗೂ ಬೆಳಕು ಬಾರದ ಗುಹೆಯಲ್ಲಿ ದೀಪ ಹಚ್ಚಿಕೊಂಡು ಸ್ವಾಮೀಜಿ ಕುಳಿತಿದ್ದರು ಎನ್ನಲಾಗಿದ್ದು, ಇದೀಗ ಭಕ್ತರು ಭಾಜಾ, ಭಜಂತ್ರಿಗಳ ಮೂಲಕ ಗುಹೆಯಿಂದ ಸ್ವಾಗತ ಮಾಡಿದ್ದಾರೆ.
ಸ್ವಾಮೀಜಿ ಗುಹೆ ಪ್ರವೇಶದ ನಂತರ ಇಟ್ಟಿಗೆಯಿಂದ ಗುಹೆಯ ಬಾಗಿಲು ಬಂದ್ ಮಾಡಲಾಗಿತ್ತು. ಇದೀಗ ಹೊರ ಬಂದಿರುವ ಸ್ವಾಮೀಜಿಯನ್ನು ನೋಡಲು ಭಕ್ತರ ದಂಡು ಹರಿದುಬರುತ್ತಿದೆ. (ದಿಗ್ವಿಜಯ ನ್ಯೂಸ್)