ಮತದಾನಕ್ಕಾಗಿ ಆಸ್ಟ್ರೇಲಿಯಾದಿಂದ ಹಾವೇರಿಗೆ ಬಂದ ಮಹಿಳೆ

Astrelian lady
Published on

ಹಾವೇರಿ: ಮಹಿಳೆಯೊಬ್ಬರು ಆಸ್ಟ್ರೇಲಿಯಾದ ಸಿಡ್ನಿಯಿಂದ ಹಾವೇರಿ ನಗರಕ್ಕೆ ಮಂಗಳವಾರ ಆಗಮಿಸಿ ಮತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಇಲ್ಲಿನ ಬಸವೇಶ್ವರ ನಗರದ 12ನೇ ಕ್ರಾಸ್ ನಿವಾಸಿ ಭುವನೇಶ್ವರಿ ಕರಿಗೌಡ್ರ ವಿದೇಶದಲ್ಲಿ ವಾಸವಾಗಿದ್ದು, ಮತದಾನ ಮಾಡಲೆಂದು ನಗರಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು. ನಗರದ ಲಯನ್ಸ್ ಶಾಲೆಯಲ್ಲಿ ಭುವನೇಶ್ವರಿ ಮತದಾನ ಮಾಡಿದರು. ವಿದೇಶದಿಂದ ಬಂದು ನಾನು ಮತ ಚಲಾಯಿಸಿದ್ದೇನೆ. ಇಲ್ಲಿ ಇವರುವವರು ಕೂಡ ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದು ಹೇಳಿದರು. ಮತದಾನ ಮಾಡದೇ ಇರುವವರಿಗೆ ದಂಡ ವಿಧಿಸುವಂತೆ ಕಾನೂನು ರಚಿಸಬೇಕೆಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net