ರಾಮನವಮಿ, ಸಾಯಿಬಾಬಾ ಜನ್ಮದಿನೋತ್ಸವ ನಾಳೆ

Rama Saibaba
Published on

ಹಾವೇರಿ: ಇಲ್ಲಿನ ಅಶ್ವಿನಿನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಏ.6ರಂದು ಶ್ರೀ ರಾಮನವಮಿ ಉತ್ಸವ ಹಾಗೂ ಶ್ರೀ ಶಿರಡಿ ಸಾಯಿಬಾಬಾರ ಜನ್ಮದಿನೋತ್ಸವ ಹಮ್ಮಿಕೊಳ್ಳಲಾಗಿದೆ.

ಬೆಳಗ್ಗೆ 6.15ಕ್ಕೆ ಶ್ರೀ ಸಾಯಿಬಾಬಾರಿಗೆ ಕಾಕಡಾರತಿ, ಮಂಗಲ ಸ್ನಾನಾರತಿ, ಬೆಳಗ್ಗೆ 10.30ಕ್ಕೆ ಬಾಬಾರ ತೊಟ್ಟಿಲೋತ್ಸವ, ನೈವೇದ್ಯ ಆರತಿ, ಮಧ್ಯಾಹ್ನ ಪ್ರಸಾದ ವಿತರಣೆ, ಸಂಜೆ 6.30ಕ್ಕೆ ಧೂಪಾರತಿ, ಸಂಜೆ 7ಕ್ಕೆ ಪಲ್ಲಕ್ಕಿ ಉತ್ಸವ, ರಾತ್ರಿ 8.30ಕ್ಕೆ ಶೇಜಾರತಿ ಜರುಗಲಿದೆ ಎಂದು ಶ್ರೀ ಶಿರಡಿ ಸಾಯಿಬಾಬಾ ಸೇವಾ ಸಮಿತಿ ಟ್ರಸ್ಟ್ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net