ದಸರಾ ಕವಿಗೋಷ್ಠಿಗೆ ಕವಯತ್ರಿ ಅರ್ಚನಾ ಪಾಟೀಲ ಆಯ್ಕೆ

Archana Patil
Published on

ಹಾವೇರಿ: ನಾಡಹಬ್ಬ ಮೈಸೂರು ದಸರಾ ಕವಿಗೋಷ್ಠಿಗೆ ಇಲ್ಲಿನ ಅಶ್ವಿನಿ ನಗರದ ಯುವ ಸಾಹಿತಿ, ಕವಯತ್ರಿ ಅರ್ಚನಾ ಪಾಟೀಲ ಆಯ್ಕೆಯಾಗಿದ್ದಾರೆ.
ಅ.19ರಂದು ಮಧ್ಯಾಹ್ನ 2.30ಕ್ಕೆ ಮೈಸೂರಿನ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ ಸಭಾಂಗಣದಲ್ಲಿ ನಡೆಯಲಿರುವ ಯುವ ಕವಿಗೋಷ್ಠಿಗೆ ಅರ್ಚನಾ ಪಾಟೀಲ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರುವ ಅರ್ಚನಾ, 'ನೀ ಹೋಗುವ ಮುನ್ನ' ಕವನ ಸಂಕಲನ, ಅವಳ ಉತ್ತರ ಕಾದಂಬರಿ, ಚೈತನ್ಯ ಚಿಲುಮೆ ಜೀವನಚರಿತ್ರೆ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ದಸರಾ ಕವಿಗೋಷ್ಠಿಗಾಗಿ ಸಾವಿರಾರು ಬರಹಗಾರರ ಪೈಪೋಟಿ ನಡುವೆ ಆಯ್ಕೆಯಾದ ಕೆಲವೇ ಕವಿಗಳಲ್ಲಿ ಅರ್ಚನಾ ಕೂಡ ಒಬ್ಬರಾಗಿದ್ದಾರೆ ಎಂದು ಮೊಳಕಾಲ್ಮೂರು ತನುಶ್ರೀ ಪ್ರಕಾಶನ ಸಂಸ್ಥೆಯ ಅಧ್ಯಕ್ಷ ರಾಜು ಸೂಲೇನಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಲವು ಪ್ರಶಸ್ತಿಯ ಗರಿ
ಸಾಫ್ಟವೇರ್ ಕೆಲಸದ ಜತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಅರ್ಚನಾ ಅವರಿಗೆ ವಿವಿಧ ಸಂಸ್ಥೆಗಳಿಂದ ಸಾಹಿತ್ಯ ಸಿರಿ ಪ್ರಶಸ್ತಿ, ಕನ್ನಡದ ಮಾಣಿಕ್ಯ ಪ್ರಶಸ್ತಿ, ಹೆಮ್ಮೆಯ ಕನ್ನಡತಿ, ಪಂಡಿತ ಪುಟ್ಟರಾಜ ಗವಾಯಿಗಳ ಸದ್ಭಾವನಾ ಪ್ರಶಸ್ತಿ, ತ್ರಿವೇಣಿ ರತ್ನ ಪ್ರಶಸ್ತಿ, ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net