ಸಾಧಕ ರತ್ನ ಪ್ರಶಸ್ತಿಗೆ ಗಣೇಶ ರಾಯ್ಕರ ಆಯ್ಕೆ

Ganesh Raikar
Published on

ಹಾವೇರಿ: ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ ಮಹದೇವಪ್ಪ ಎಜುಕೇಶನ್ ಆರ್ಟ್ ಆ್ಯಂಡ್ ಕಲ್ಚರಲ್ ಟ್ರಸ್ಟ್ ವತಿಯಿಂದ ಹಾವೇರಿಯ ಸಿರಿಧಾನ್ಯ ಚಿತ್ರ ಕಲಾವಿದ ಗಣೇಶ ವೆಂಕಟೇಶ ರಾಯ್ಕರ್ ರಾಜ್ಯಮಟ್ಟದ ಕರ್ನಾಟಕ ಸಾಧಕ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

69ನೇ ಕನ್ನಡ ರಾಜ್ಯೋತ್ಸವದ ವರ್ಷಾಚರಣೆ ಅಂಗವಾಗಿ ಬಳ್ಳಾರಿಯಲ್ಲಿ ಡಿ.1ರಂದು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಗುವುದು. ಸಿರಿಧಾನ್ಯ ಚಿತ್ರಕಲೆ, ಬಂಗಾರದ ಸೂಕ್ಷ್ಮ ಕಲೆ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ ಎಂದು ಟ್ರಸ್ಟ್ ಗೌರವಾಧ್ಯಕ್ಷ ಬಸವರಾಜ ಬಿಸಲಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net